About the Author

ಡಾ. ರಾಜೇಶ್ವರಿ ಗೌತಮ್ ಅವರು ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ ದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಪೂರ್ಣಗೊಳಿಸಿದ್ದಾರೆ. ಆನಂತರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ನೆಹರು ಮೆಮೋರಿಯಲ್ ಕಾಲೇಜು ಸುಬ್ರಹ್ಮಣ್ಯ ,  ಕೆ. ವಿ. ಜಿ. ಡೆಂಟಲ್ ಕಾಲೇಜು ಸುಳ್ಯ ದಲ್ಲಿ ಬಿ. ಡಿ. ಎಸ್     ಪೂರ್ಣಗೊಳಿಸಿ  ದಂತ ವೈದ್ಯ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯದ ಒಲವಿರುವ ಅವರು ಲೇಖನ, ಕಥೆಗಳನ್ನು ಬರೆಯುತ್ತಾರೆ. ಅಲ್ಲದೆ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳಲ್ಲಿ ಭಾಷಣಕಾರರಾಗಿಯೂ ಭಾಗವಹಿಸುತ್ತಾರೆ.

ರಾಜೇಶ್ವರಿ ಗೌತಮ್