About the Author

ಕಾದಂಬರಿಕಾರ, ಕವಿ ರಾಮಚಂದ್ರ ಕೊಟ್ಟಲಗಿ ಅವರು ಜನಿಸಿದ್ದು 1916 ಆಗಸ್ಟ್‌ 5ರಂದು. ವಿಜಯಪುರ ಜಿಲ್ಲೆಯ ಮನಗೋಳಿಯವರು. ದೀಪನಿರ್ವಾಣ ಇವರ ಚೊಚ್ಚಲ ಕಾದಂಬರಿ. ಇದರ ಎರಡನೇ ಭಾಗವಾಗಿ ದೀಪ ಹತ್ತಿತು ಕೃತಿ ಹೊರತಂದರು. 

ಇವರ ಕಾದಂಬರಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ. ವಿಲಾಪಿಕಾ, ವೈನಿ ಸತ್ತಾಗ ನಾನ್ಯಾ ಅತ್ತಾಗ ಮತ್ತು ನಾನು ಬಾಳ್ಯಾ ಜೋಶಿ (ಕಾದಂಬರಿಗಳು),  ಪಿಪಾಸೆ, ಪ್ರತಿಮಾ (ಕವನ ಸಂಕಲನ), ಗೀಚುಗೆರೆ ಹಾಗೂ ಚೈತ್ರ ಪಲ್ಲವ (ಕಥಾ ಸಂಕಲನಗಳು), ಭಾಷಾ ಸಮನ್ವಯದ ಸಮಸ್ಯೆ ಮುಂತಾದವು ಇವರ ಪ್ರಮುಖ ಕೃತಿಗಳು. 

ಕನ್ನಡ ವಾರಪತ್ರಿಕೆಯೊಂದರ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. 1975 ಸೆಪ್ಟೆಂಬರ್ 20 ರಂದು ಮರಣಹೊಂದಿದರು.

ರಾಮಚಂದ್ರ ಕೊಟ್ಟಲಗಿ

(16 May 1918-20 Sep 1975)