ದೀಪ ಹತ್ತಿತು ಭಾಗ-2

Author : ರಾಮಚಂದ್ರ ಕೊಟ್ಟಲಗಿ

Pages 688

₹ 100.00
Year of Publication: 1968
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ್ ಬೀದಿ, ಧಾರವಾಡ

Synopsys

`ದೀಪ ಹತ್ತಿತು ಭಾಗ-2’ ಕೃತಿಯು ರಾಮಚಂದ್ರ ಕೊಟ್ಟಲಗಿ ಅವರ ಕಾದಂಬರಿಯಾಗಿದೆ. ಈ ಕಾದಂಬರಿಯ ಮೊದಲನೆಯ ಭಾಗವಾಗಿ ‘ದೀಪ ನಿರ್ವಾಣ’ ಕೃತಿಯು ಬಂದಿದ್ದು, ‘ದೀಪ ಹತ್ತಿತು’ ಕೃತಿಯು ಎರಡನೇಯ ಭಾಗವಾಗಿದೆ. ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯ ಅನಾವರಣ ಈ ಕಾದಂಬರಿಯಲ್ಲಿ ಆಗಿದ್ದೂ, ಅಲ್ಲಿನ ಜನರ ಬದುಕು, ಸಂಸ್ಕೃತಿಗಳನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿ ಬಹು ಸಹಕಾರಿ. ಈ ಕಾದಂಬರಿಗಳು ಕೊಟ್ಟಲಗಿಯವರ ಸಹೋದರಿಯಿಂದ ಮರಾಠಿಗೂ ಅನುವಾದಗೊಂಡಿರುತ್ತದೆ.

 

About the Author

ರಾಮಚಂದ್ರ ಕೊಟ್ಟಲಗಿ
(16 May 1918 - 20 September 1975)

ಕಾದಂಬರಿಕಾರ, ಕವಿ ರಾಮಚಂದ್ರ ಕೊಟ್ಟಲಗಿ ಅವರು ಜನಿಸಿದ್ದು 1916 ಆಗಸ್ಟ್‌ 5ರಂದು. ವಿಜಯಪುರ ಜಿಲ್ಲೆಯ ಮನಗೋಳಿಯವರು. ದೀಪನಿರ್ವಾಣ ಇವರ ಚೊಚ್ಚಲ ಕಾದಂಬರಿ. ಇದರ ಎರಡನೇ ಭಾಗವಾಗಿ ದೀಪ ಹತ್ತಿತು ಕೃತಿ ಹೊರತಂದರು.  ಇವರ ಕಾದಂಬರಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ. ವಿಲಾಪಿಕಾ, ವೈನಿ ಸತ್ತಾಗ ನಾನ್ಯಾ ಅತ್ತಾಗ ಮತ್ತು ನಾನು ಬಾಳ್ಯಾ ಜೋಶಿ (ಕಾದಂಬರಿಗಳು),  ಪಿಪಾಸೆ, ಪ್ರತಿಮಾ (ಕವನ ಸಂಕಲನ), ಗೀಚುಗೆರೆ ಹಾಗೂ ಚೈತ್ರ ಪಲ್ಲವ (ಕಥಾ ಸಂಕಲನಗಳು), ಭಾಷಾ ಸಮನ್ವಯದ ಸಮಸ್ಯೆ ಮುಂತಾದವು ಇವರ ಪ್ರಮುಖ ಕೃತಿಗಳು.  ಕನ್ನಡ ವಾರಪತ್ರಿಕೆಯೊಂದರ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಇವರಿಗೆ ಕರ್ನಾಟಕ ರಾಜ್ಯ ...

READ MORE

Related Books