About the Author

ರತ್ನಮ್ಮ ಕೆ. ಎಸ್. ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಸೇವೆ ಸಲ್ಲಿಸಿದ ಅವರು ಹುಟ್ಟಿದ್ದು 1953 ನವೆಂಬರ್‌ 20 ನಂಜನಗೂಡಿನಲ್ಲಿ. ತಂದೆ ಕೆ. ಎಸ್. ಸುಬ್ಬಣ್ಣ, ತಾಯಿ ಕೆ. ಜಿ. ನಾಗಮಣಿ. ಎಂ.ಎ , ಪಿ.ಹೆಚ್ ಡಿ ಪದವಿ ಪಡೆದಿರುವ ಅವರು ಅನೇಕ ಕೃತಿಗಳನ್ನು ನೀಡಿದ್ಧಾರೆ.

‘ವರನಂದಿ ಕಲ್ಯಾಣ’  ಎಂಬ ಸಾಂಗತ್ಯ ಕಾವ್ಯ, ‘ಕುವೆಂಪು ಸಾಹಿತ್ಯದಲ್ಲಿ ಮಹಿಳೆ , ಚಿಗುರು, ಮಂಥನ, ನೆಲೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ವಚನ ಸಾಹಿತ್ಯ ಸಂಚಯ , ಕುವೆಂಪು ಸಾಹಿತ್ಯದಲ್ಲಿ ಮಹಿಳೆ, ಮರಿಮಲ್ಲಪ್ಪನವರ ಜೀವನ ಸಾಧನೆ, ಜಯದೇವಿ ತಾಯಿ ಲಿಗಾಡೆ, ಬಾಹ್ಯಾಕಾಶದ ಮಿನುಗುತಾರೆ, ನಾಟಕತ್ರಯ, ಕ್ಷಿಪಣೆ ವಿಜ್ಞಾನಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ, ಹರಿಹರನ ರಗಳೆಯ ಕತೆಗಳು, ಗದ್ಯಾನುವಾದ, ವಿಜಯಾನ್ವೇಷಣೆ’ ಮುಂತಾದ ವಿಮರ್ಶಾ ಕೃತಿಗಳನ್ನು ಹೊರತಂದಿದ್ದಾರೆ.

ಶ್ರೀ ಕುವೆಂಪು ’ಕವಿರತ್ನ’ ಪ್ರಶಸ್ತಿ, ಸುವರ್ಣ ಕರ್ನಾಟಕ ಹೊಯ್ಸಳ ಪ್ರಶಸ್ತಿ, ವಚನ ಶ್ರೀ, ಬಸವಜ್ಯೋತಿ ರಾಜ್ಯಮಟ್ಟದ ಪ್ರಶಸ್ತಿ, ಶ್ರೀ ಬಸವೇಶ್ವರ ಸದ್ಭಾವನ ಪ್ರಶಸ್ತಿ, ಸಂಚಿಹೊನ್ನಮ್ಮ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ರತ್ನ ಮುಂತಾದ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ರತ್ನಮ್ಮ ಕೆ.ಎಸ್.

(20 Nov 1953)