About the Author

ರೇವತಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಕೋಟದವರು. ಪ್ರಸ್ತುತ ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರವನ್ನು ವೃತ್ತಿ ಹಾಗೂ ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಇವರ ಭಿನ್ನ ಅಭಿರುಚಿಯ ಕತೆ, ಕವನ, ಅಂಕಣ ಬರಹಗಳು ಮಂಗಳೂರು ಆಕಾಶವಾಣಿಯ ಯುವವಾಣಿ ವಿಭಾಗದಲ್ಲಿ ಪ್ರಸಾರಗೊಂಡಿದ್ದವು. “ಬೆಳ್ಳಿಚುಕ್ಕಿ” ಮತ್ತು “ರಾಜಧಾನಿಯ ಪಿಸುಮಾತು” ಹಲವು ವಿಚಾರಗಳ ಸುತ್ತ ಕೆಂದ್ರೀಕೃತವಾಗಿದ್ದವು ಮಂಗಳ ವಾರಪತ್ರಿಕೆ, ಉದಯವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಸಂದರ್ಶನ ಬರಹ ಮತ್ತು ಕತೆಗಳು ಪ್ರಕಟಗೊಂಡಿವೆ. ಪ್ರತಿಷ್ಟಿತ ವೇದಿಕೆಗಳಲ್ಲಿ ನೂರಕ್ಕೂ ಅಧಿಕ ಕಾರ್ಯಕ್ರಮಗಳಿಗೆ ' ನಿರೂಪಣೆ ಹಲವಾರು ಸಾಕ್ಷ್ಯಚಿತ್ರ, ವ್ಯಕ್ತಿಚಿತ್ರಣ ಹಾಗೂ ಜಾಹೀರಾತುಗಳಿಗೆ ' ಕಂಠದಾನ ” ಮಾಡಿದ ಹೆಗ್ಗಳಿಕೆ. 2006ರಿಂದ ಬೆಂಗಳೂರಿನ ಆಲ್ ಇಂಡಿಯಾ ರೇಡಿಯೊದ ಎಫ್.ಎಂ ರೈನ್‌ಬೋನಲ್ಲಿ ಆರ್.ಜೆ ಯಾಗಿ ಕೆಲಸ ಮಾಡಿದ್ದ ಅವರು ಹಲವಾರು ಮಹನೀಯರನ್ನ ಸಂದರ್ಶಿಸುವುದರ ಜೊತೆಗೆ “ ಚಲ್ತೆ ಚಲ್ತೆ ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದ ಕೇಳುಗರನ್ನ ಗಳಿಸಿಕೊಂಡಿದ್ದರು. ದೂರದರ್ಶನದ ಚಂದನ ವಾಹಿನಿಯಲ್ಲಿ “ಕೃಷಿ ದರ್ಶನ” ಹಾಗೂ ಮಣ್ಣಿನ ಮಕ್ಕಳು ಕಾರ್ಯಕ್ರಮದ ಸಂದರ್ಶಕಿಯಾಗಿ ಪರಿಚಿತರು.

ಕೃತಿಗಳು: ಕಸೂತಿಯಾಗದ ದಾರದುಂಡೆ, ಬೆಳ್ಳಿಚುಕ್ಕಿ

ರೇವತಿ ಶೆಟ್ಟಿ