About the Author

ರೋಹಿಣಿ ಬಿ.ಎಂ., ಎಂ.ಎ.(ಕನ್ನಡ) ಹಿಂದಿ(ಪ್ರವೀಣ) ಶಿಕ್ಷಣ ಪಡೆದ ಇವರು ನಿವೃತ್ತ ಶಿಕ್ಷಕಿ. 1944ರ ಏಪ್ರಿಲ್‌ 06 ರಂದು ಬಂಗ್ರ ಮಂಜೇಶ್ವರ ಕಾಸರಗೋಡಿನಲ್ಲಿ ಜನಿಸಿದರು.  ತಂದೆ  ಟಿ. ಕೊಗ್ಗಪ್ಪ, ತಾಯಿ ಬಿ.ಎಂ. ದೇವಕಿ. ಈಗ ಕೇರಳಕ್ಕೆ ಸೇರಿದ ಕಾಸರಗೋಡಿನ ಬಂಗ್ರಮಂಜೇಶ್ವರದ ಬಿ.ಎಂ.ರೋಹಿಣಿ ಓದಿದ್ದು ಮಂಗಳೂರಿನಲ್ಲಿ. ಟಿ.ಸಿ.ಹೆಚ್, ತರಬೇತಿ ಪಡೆದು ಶಿಕ್ಷಕಿಯಾಗಿದ್ದವರು (1964-2002), ನಿವೃತ್ತಿಯ ನಂತರ ತುಳಿತಕ್ಕೆ ಒಳಗಾದವರ ಬದುಕು ಬವಣೆಗಳ ಅಧ್ಯಯನ ಮತ್ತು ಸಂಸ್ಕತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಮಂಗಳೂರಿನ `ಡೀಡ್' ಸಂಸ್ಥೆಯ ಮೂಲಕ ವೇಶ್ಯಾಜೀವನದ ಅಧ್ಯಯನ ನಡೆಸಿದರು. ಆಮೇಲೆ ಗುಲಾಬಿ ಬಿಳಿಮಲೆಯವರ ಜೊತೆ ಸೇರಿ ದ.ಕ ಜಿಲ್ಲಾ ಮಹಿಳಾ ಕಾರ್ಮಿಕರ ಹೋರಾಟವನ್ನು ಅಮೂಲಾಗ್ರವಾಗಿ ದಾಖಲಿಸಿದರು. ಬಿ.ಎಂ.ರೋಹಿಣಿಯವರು ಬಿಲ್ಲವರ ಗುತ್ತುಮನೆಗಳ ಸಂಶೋಧನೆ ನಡೆಸಿದ ತಂಡದಲ್ಲೂ ಇದ್ದರು. 'ಮಹಾಪುರುಷರ ಜೀವನ ಕಥನ' (ಮಕ್ಕಳ ಸಾಹಿತ್ಯ), 'ಪಾವಂಜೆ ಗೋಪಾಲಕೃಷ್ಣಯ್ಯ', ’ಲಲಿತಾ ಆರ್ ರೈ' (ವ್ಯಕ್ತಿಚಿತ್ರಗಳು) ಅವರ ಇತರ ಕೃತಿಗಳು.

ಸ್ತ್ರೀ ಸಂವೇದನೆ (1995), ಸಾಮಾಜಿಕ ತಲ್ಲಣಗಳು (2007), ಸ್ತ್ರೀ-ಸಂಸ್ಕೃತಿ ಶಿಕ್ಷಣ (ಲೇಖನ ಸಂಕಲನ) (2000), ಸ್ತ್ರೀ-ಭಿನ್ನ ಮುಖಗಳು (ಲೇಖನ ಸಂಕಲನ) (2005), ಅಧ್ಯಾಪಿಕೆಯ ಅಧ್ಯಾನಗಳು (2007), ಅವಿವಾಹಿತ ಮಹಿಳೆಯರ ಸಮಾಜೊ ಸಾಂಸ್ಕೃತಿಕ ಅಧ್ಯಯನ (ಡಾ. ಸಬಿಹಾ ಅವರ ಜೊತೆ) (2008), ತುಳುನಾಡಿನ ಮಾಸ್ತಿಕಲ್ಲುಗಳು (ಶಶಿರೇಖಾ ಬಿ. ಅವರ ಜೊತೆ) - ವೀರಗಲ್ಲುಗಳು (ಸಂಶೋಧನಾ ಕೃತಿ) (2010), ಕರ್ತವ್ಯ (ಕಥಾಸಂಕಲನ),  ಶ್ರೀಮತಿ ಲಲಿತಾ ಆರ್.ರೈ ವ್ಯಕ್ತಿ ಪರಿಚಯ (2007), 'ಪಾವಂಜೆ ಗೋಪಾಲಕೃಷ್ಣಯ್ಯ (ವ್ಯಕ್ತಿ ಪರಿಚಯ) (2009)ರಲ್ಲಿ ಪ್ರಕಟಗೊಂಡಿದೆ.  ಅವರಿಗೆ ಶ್ರೀಮತಿ ಲಲಿತಮ್ಮ ಗುರುಸಿದ್ದಪ್ಪ ಸಿಂಧೂರ (ಸ್ತ್ರೀ ಸಂವೇದನೆಗೆ) ಪ್ರಶಸ್ತಿ 1996 ಕನ್ನಡ ಸಾಹಿತ್ಯ ಪರಿಷತ್ತು, ಸ್ತ್ರೀ ಶಿಕ್ಷಣ ಸಂಸ್ಕೃತಿಗೆ 2001 ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೇಷ್ಠಕೃತಿ ಪ್ರಶಸ್ತಿ, ಮೌಲ್ಯ ಗೌರವ ಪ್ರಶಸ್ತಿ (2006) ಲಭಿಸಿವೆ. ಇವರ ನಾಗದಂದಿಗೆಯೊಳಗಿಂದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. 

 

 

ರೋಹಿಣಿ ಬಿ.ಎಂ.

(06 Apr 1944)

Awards