About the Author

ಡಾ. ಎಸ್. ನರೇಂದ್ರಕುಮಾರ ಅವರು ಚಾಮನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗಹಳ್ಳಿ (ಜನನ: 22-12-1973) ಗ್ರಾಮದವರು ತಂದೆ ಶ್ರೀನಿವಾಸಮೂರ್ತಿ, ತಾಯಿ ಮಾಲತಿ. ಪ್ರಸ್ತುತ ಇವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ  ಸಂಯೋಜನಾಧಿಕಾರಿಯಾಗಿದ್ದಾರೆ. "ದೇವನೂರು, ನಾಗವಾರ, ಕುಂವೀ ಅವರ ಕಥೆಗಳು ಒಂದು ಅಧ್ಯಯನ" ಇವರ ಪಿಎಚ್.ಡಿ ಪ್ರಬಂಧ.

ಕೃತಿಗಳು: ಹೊಸ ಸಮಾಜ ಮತ್ತು ಅಂಬೇಡ್ಕರ್ ( ಅಂಬೇಡ್ಕರ್ ಚಿಂತನೆಗಳ ವಿಮರ್ಶಾ ಲೇಖನಗಳು), ನಿಜದ ನೆಲೆ (ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಲೇಖನಗಳು), ಬೋಧಿನೆಲದ ಮಾತು (ಸಾಹಿತ್ಯ, ವೈಚಾರಿಕ, ಸಾಂಸ್ಕೃತಿಕ, ಸಮಕಾಲೀನ ವಿಚಾರಗಳ ಲೇಖನಗಳು), ದಸಂಸ ಹೋರಾಟದ ಪಯಣ ( ಮೈಸೂರು ಜಿಲ್ಲೆಯ ದಸಂಸ ನಡೆಸಿದ ಹೋರಾಟದ ಹೆಜ್ಜೆ ಗುರುತುಗಳು), ಮೂರುಬೊಗಸೆ ನೀರು (ಅಂಬೇಡ್ಕರ್ ಪ್ರಜ್ಞೆಯಲ್ಲಿ ದೇವನೂರು ಮಹಾದೇವ, ಕಾಳೇಗೌಡ ನಾಗವಾರ ಹಾಗೂ ಕುಂ.ವೀರಭದ್ರಪ್ಪ ಅವರ ಕಥೆಗಳ ಅಧ್ಯಯನ)

ಸಂಪಾದಿತ ಕೃತಿಗಳು: ಅಂಬೇಡ್ಕರ್ ಅಂತರಂಗ ೨೦೦೨ (ಅಂಬೇಡ್ಕರ್ ಅವರ ಹಾಗೂ ಅಂಬೇಡ್ಕರ್ ಬಗೆಗೆ ಬಂದಿರುವ ಲೇಖನಗಳ ಸಂಗ್ರಹ), ಅಂಬೇಡ್ಕರ್ ಸೂಕ್ತಿಗಳು ( ಅಂಬೇಡ್ಕರ್ ಚಿಂತನೆಗಳ ಸಂಕ್ಷಿಪ್ರ ಸಂಗ್ರಹ), ಬತ್ತಲಾರದ ಬದುಕು ( ಕೊರಚ ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಛಾಯಚಿತ್ರಗಳ ಸಂಗ್ರಹ), ಮರಳಿ ಮನೆಗೆ ೨೦೦೬ (ಬುದ್ಧನ ಬಗೆಗೆ ಬಂದಿರುವ ಲೇಖನಗಳು ಕವನಗಳು ಹಾಗೂ ಬೌದ್ಧ ಭಿಕ್ಕುಗಳು ಮತ್ತು ಉಪಾಸಕರನ್ನು ಸಂದರ್ಶಿಸಿದ ಬರಹಗಳ ಸಂಗ್ರಹ), 

ಸಹ ಸಂಪಾದಿತ ಕೃತಿಗಳು: ನೋವು ಹೆತ್ತ ಪ್ರೀತಿ ( ಅರವಿಂದ ಮಾಲಗತ್ತಿ ಅವರ ಆತ್ಮಕಥೆ 'ಗೌರ್ಮೆಂಟ್ ಬ್ರಾಹ್ಮಣ' ಕುರಿತ ಬರಹಗಳ ಸಂಗ್ರಹ), ಅಭಿಮುಖಿ (ಅಂಬೇಡ್ಕರ್ ಅವರ ತತ್ವ್ತ ಹಾಗೂ ಚಿಂತನೆಗಳನ್ನು ಅಂತರ್ಗತವಾಗಿಸಿಕೊಂಡ ಲೇಖನಗಳ ಸಂಗ್ರಹ), ಅರಿವಿನ ಕುರುಹು  (2001-02೨ನೇ ಸಾಲಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳ ಸಂಕಲನ) ಬಹುಶ್ರುತತೆ (ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಂಡಿಸಲಾದ ಪ್ರಬಂಧಗಳು ಹಾಗೂ ವಿಶೇಷ ಉಪನ್ಯಾಸಗಳ ಸಂಗ್ರಹ), ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ( ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರಜಾವಾಣಿ ಪ್ರಕಟಿಸಿದ ದಲಿತಪ್ರಜ್ಞೆಯ ವಿಶೇಷ ಲೇಖನಗಳ ಸಂಗ್ರಹ)

ಕಿರು ರೂಪಕ ಬುದ್ಧನ ಪ್ರೇಮಯಾತ್ರೆ, ಜೀವನ ಚರಿತ್ರೆ: ಮಹಾಚೇತನ (ಡಾ.ಬಿ.ಆರ್.ಅಂಬೇಡ್ಕರ್ ಕುರಿತದ್ದು) , ನವಸಾಕ್ಷರರಿಗಾಗಿ ಬರೆದ ಬರಹಗಳು , ಯಾರಿಗೂ ಯಾರಿಲ್ಲ (ಕಿರುಕಥೆ), ವಿಚಾರವಾದಿ ಡಾ.ಕೋವೂರ್ (ವ್ಯಕ್ತಿಚಿತ್ರ) , ಗೌತಮಬುದ್ಧ ಹೇಳಿದ ಕಥೆಗಳು 

ಪ್ರಶಸ್ತಿ-ಗೌರವ: ಬೋಧಿ ನೆಲದ ಮಾತು' ಕೃತಿಗೆ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಗದಗ ಇವರಿಂದ 2009ನೇ ಸಾಲಿನ ದಲಿತ ಸಾಹಿತ್ಯ ಸಂಕೀರ್ಣ ಪ್ರಕಾರದಲ್ಲಿ ಪುಸ್ತಕ ಪ್ರಶಸ್ತಿ, .ಚಾಮರಾಜ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಮಗ್ರ ಸಾಹಿತ್ಯ ಸೇವೆಗಾಗಿ ಅಭಿನಂದನೆ, 

ಎಸ್. ನರೇಂದ್ರಕುಮಾರ್

(22 Dec 1973)