About the Author

ಡಾ. ಎಸ್.ಪಿ ಯೋಗಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಎಸ್.ಎಸ್.ಎಲ್.ಸಿ ಯಲ್ಲಿ 30ನೇ ರ್‍ಯಾಂಕ್ ಪಡೆದು, ಎಂ.ಬಿ.ಬಿ.ಎಸ್ (3 ನೇ ರ್‍ಯಾಂಕ್- 1977), ಎಂ.ಡಿ.(ಮೆಡಿಸಿನ್-1981), ಎಫ್, ಐ.ಸಿ.ಎ( ಯು.ಎಸ್.ಎ,-1982), ಎಫ್.ಸಿ.ಸಿ.ಪಿ (1983) ಯನ್ನು ಯು.ಎಸ್.ಎ ಯಲ್ಲಿ ಪಡೆದಿರುತ್ತಾರೆ. ಕನ್ನಡದಲ್ಲಿ ವೈದ್ಯಶಾಸ್ತ್ರದ ಬೆಳವಣಿಗೆ, ವ್ಯವಸಾಯ, ಮೀನುಗಾರಿಕೆ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಅವರ ವಿಶೇಷ ಆಸಕ್ತಿಯಾಗಿದೆ. ಮೈಸೂರಿನ ಎಂ.ಎಂ.ಸಿ ಮತ್ತು ಆರ್. ಐ ಕಾಲೇಜಿನಲ್ಲಿ ವೈದ್ಯಶಾಸ್ತ್ರ ಪ್ರಾಧ್ಯಾಪಕರು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸಲಹಾ ವೈದ್ಯ ತಜ್ಞರು ಮತ್ತು ಹೃದ್ರೋಗ ತಜ್ಞರು, ಆರೋಗ್ಯ ಯೋಗ ವೈದ್ಯಕೀಯ ಸಲಹಾ ಕೇಂದ್ರ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು : ದುಶ್ಚಟಗಳು ಮತ್ತು ಪರಿಣಾಮಗಳು, ಪ್ರಧಾ ರೋಗಗಳು (ಸ್ಥೂಲ ಪರಿಚಯ), ಹೃದಯಾಘಾತ, ಅಸ್ತಮಾ, ಸಮಗ್ರ ಆರೋಗ್ಯ ದರ್ಶನ, ನಾನ್ಯಾರು, ಅಭ್ಯಾಸಗಳು ಮತ್ತು ಆರೋಗ್ಯ, ಲೈಂಗಿಕಶಾಸ್ತ್ರ, ಸಕ್ಕರೆಕಾಯಿಲೆ, ಯೋಗ ಮತ್ತು ಇತರ ಅಭ್ಯಾಸಗಳು.

ಪ್ರಶಸ್ತಿ-ಪುರಸ್ಕಾರಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಅನುಪಮ ನಿರಂಜನ ಪ್ರಶಸ್ತಿ (2015), ಬಿ.ಸಿ. ರಾಯ್ ಪ್ರಶಸ್ತಿ, ಆರ್.ಎಲ್. ನರಸಿಂಹಯ್ಯ ವಿಜ್ಞಾನ ಪ್ರಶಸ್ತಿ ಮೈಸೂರು ವಿಶ್ವ ವಿದ್ಯಾನಿಲಯ, ಐ.ಎಂ.ಎ ರಾಜ್ಯ ಶಾಖೆ ಸನ್ಮಾನ , ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಐ.ಎಂ.ಎ ರಾಜ್ಯ ಶಾಖೆ ಕನ್ನಡ ಬರಹಗಾರರ ಬಳಗ ಬೆಂಗಳೂರು ಇವರಿಂದ (2017), ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.

 

ಎಸ್.ಪಿ ಯೋಗಣ್ಣ

(08 May 1955)