About the Author

ಡಾ. ಎಸ್.ಆರ್. ಕೇಶವ ಅವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಥಶಾಸ್ತ್ರವನ್ನು ಬಹುಶಿಸ್ತೀಯ ನೆಲೆಗಳಲ್ಲಿ ಸಂಶೋಧನೆಗೆ ಒಳಪಡಿಸುತ್ತಾ ವಿವಿಧ ಪತ್ರಿಕೆಗಳಲ್ಲಿ ಅರ್ಥಶಾಸ್ತ್ರದ ಅಂಕಣಕಾರರಾಗಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ (ಇಂಗ್ಲೆಂಡ್, ಸಿಂಗಾಪುರ, ಥೈಲಾಂಡ್ ಮತ್ತು ನೇಪಾಲ) ವಿಚಾರ ಸಂಕಿರಣಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಇವರು, ಕನ್ನಡದಲ್ಲಿ 'ಅಮರ್ತ್ಯಸೇನ್', 'ಜೆ.ಸಿ. ಕುಮಾರಪ್ಪ' ಮತ್ತು 'ಬಾಬಾ ಆಮ್ಮೆ' ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ 'ಡೆಡ್ ಬಟ್ ಸ್ಟಿಲ್  - ಅಲೈವ್', 'ಎಕನಾಮಿಕ್ಸ್', 'ಬೆಟರ್ ಎಕ್ಸ್‌ಪ್ರೆಶನ್ ಆನ್ ಗ್ಲೋಬಲೈಸೇಷನ್', 'ಎ ಪಯನೀರ್ ಆಫ್ ಅಗ್ರಿಕಲ್ಡರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ- ಸಿದ್ದನಗೌಡ ಪಾಟೀಲ್' ಮುಂತಾದ ಕೃತಿಗಳನ್ನು ರಚಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಇವರ ಸಂಪಾದಕತ್ವದಲ್ಲಿ ಇಪ್ಪತ್ತೈದು ಪುಸ್ತಕಗಳು ಪ್ರಕಟವಾಗಿವೆ. 

ಎಸ್.ಆರ್. ಕೇಶವ