About the Author

ಲೇಖಕ ಎಸ್. ರಾಜು ಸೂಲೇನಹಳ್ಳಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರದ ಸೂಲೇನಹಳ್ಳಿ ಗ್ರಾಮದವರು. ಎಂ. ಎ., ಬಿ. ಈಡಿ, ಡಿ. ಈಡಿ. ಹಾಗೂ ಎಂ.ಫಿಲ್ ಪದವೀಧರರು. ಪ್ರಸ್ತುತ ಎಸ್. ಜೆ. ಎಂ. ವಿದ್ಯಾಸಂಸ್ಥೆ ಯ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಸಾಹಿತ್ಯ ಮತ್ತು ಸಂಘಟನೆ, ಕತೆ, ಕಾದಂಬರಿ, ಲೇಖನ, ಕವನ ಹಾಗೂ ಸಂಶೋಧನಾ ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರು, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರು.

ಕೃತಿಗಳು: ಪ್ರೇಮದ ಹಣತೆ (ಚಲನಚಿತ್ರಕ್ಕೆ ಆಯ್ಕೆಯಾದ ಕಾದಂಬರಿ, ಹಿಂದಿ, ತೆಲುಗು  ಭಾಷೆಗೂ ಅನುವಾದಗೊಂಡಿದೆ) ಒಲವೇ (ಕವನ ಸಂಕಲನ), ಸ್ಪಂದನಾ (ಕಾದಂಬರಿ), ಅವಳ ಪ್ರೇಮದ ಅಲೆಗಳು (ಕಾದಂಬರಿ), ಬುದ್ಧ ಕಾಣದ ನಗೆ (ಕವನ ಸಂಕಲನ),

ಪ್ರಶಸ್ತಿ ಮತ್ತು ಪುರಸ್ಕಾರ : ಸಿರಿಗನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತ( 2018), ಸಾಹಿತ್ಯ ಸೇವೆ ಕರುನಾಡ ಸಿರಿ ರತ್ನ ರಾಜ್ಯ ಪ್ರಶಸ್ತಿ (2019), ಕರ್ನಾಟಕ ಶಿಕ್ಷಣ ಸೇವಾ ರತ್ನ(2019), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2019-ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಮೂರು), ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ(2019 ), ಸಾಹಿತ್ಯ ವಿಭೂಷಣ ಪ್ರಶಸ್ತಿ (2019 ), ಮಾಸ್ತಿ ರಾಷ್ಟ್ರ ಪ್ರಶಸ್ತಿ (2020- ಸಮಗ್ರ ಸೇವೆ), ಮೈತ್ರಿ ಸಾಹಿತ್ಯ ರತ್ನ ಪ್ರಶಸ್ತಿ (2021),  ಕನ್ನಡ ಸಾಹಿತ್ಯ ವಿಭೂಷಣ ರಾಜ್ಯ ಪ್ರಶಸ್ತಿ (2021 ), ಕನ್ನಡ ರತ್ನ ಪ್ರಶಸ್ತಿ (2021),  ಕನ್ನಡ ಸೇವಾ ರತ್ನ ಪ್ರಶಸ್ತಿ( 2021-ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾ ಘಟಕ - ಸಾಹಿತ್ಯ), ಸಾಹಿತ್ಯ ಸಿರಿ ಪ್ರಶಸ್ತಿ ( 2021),  ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೇಷ್ಠ ಕೃತಿ ಪುರಸ್ಕಾರ ಲಭಿಸಿದೆ.

ಎಸ್. ರಾಜು ಸೂಲೇನಹಳ್ಳಿ

(01 Jun 1988)