ನಗುವ ಹೂಗಳು

Author : ಎಸ್. ರಾಜು ಸೂಲೇನಹಳ್ಳಿ

Pages 72

₹ 120.00
Year of Publication: 2022
Published by: ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ
Address: ಮೊಳಕಾಲ್ಕೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- 577535
Phone: 9741566313

Synopsys

ಲೇಖಕ ಎಸ್.‌ ರಾಜು ಸೂಲೇನಹಳ್ಳಿ ಅವರ ಸಂಪಾದಕtತ್ವದಲ್ಲಿ ಪ್ರಕಟವಾದ ಈ ಕೃತಿ ಹನಿಗವಿತೆಗಳ ಸಂಕಲನವಾಗಿದೆ. ವಿವಿಧ ಕವಿಗಳ ಹನಿಗವಿತೆಗಳು ಇಲ್ಲಿ ಸೇರಿವೆ. ಸಾಹಿತಿ ಮತ್ತು ಚಿತ್ರಕಲಾವಿದ ಜಬೀವುಲ್ಲಾ ಎಮ್. ಅಸದ್ ಅವರು ಪುಸ್ತಕದ ಮುನ್ನುಡಿಯಲ್ಲಿ, “ಹನಿಗವಿತೆಯೊಂದನ್ನು ಓದಿದಾಗ ಅದು ಕೊಡುವ ಅನುಭೂತಿ, ಉಂಟುಮಾಡುವ ತಕ್ಷಣದ ಪರಿಣಾಮ ಮುಖ್ಯವಾದುದು. ಏಕೆಂದರೆ ಒಬ್ಬ ಕಾದಂಬರಿಕಾರ ಒಂದು ಕೃತಿಯಲ್ಲಿ ಹೇಳುವ ವಿಚಾರವನ್ನು ಒಬ್ಬ ಸಮರ್ಥ ಕವಿ ಕೆಲವೇ ಸಾಲುಗಳಲ್ಲಿ ಅಭಿವ್ಯಕ್ತಿಸ ಬಲ್ಲ. ಅದು ಕವಿಯ ತಾಕತ್ತು. ನಗುವ ಹೂಗಳು ಎಂಬ ಅರ್ಥಪೂರ್ಣ ಶೀರ್ಷಿಕೆಯುಳ್ಳ ಪ್ರಸ್ತುತ ಹನಿಗವನಗಳ ಸಂಕಲನದಲ್ಲಿ ಒಟ್ಟು ಐವತ್ತೈದು ಕವಿಗಳ ಆಯ್ದ ಕಿರುಗವಿತೆಗಳಿದ್ದು ಕೆಲವೊಬ್ಬರ ಕವಿತೆಗಳು ಅದ್ಭುತವಾದವುಗಳಾಗಿದ್ದು, ಮತ್ತೆ ಕೆಲವರ ಹನಿಗವಿತೆಗಳು ಅಪವಾದ ಎನ್ನುವಂತಿವೆ. ಭಾವದುಂಬಿದವುಗಳ ಜೊತೆ ಮುರಿದ ಪದಗಳ, ಮುಕ್ಕಾದ ಭಾವಗಳ, ಕೊನೆಮೊದಲಿಲ್ಲದ ವಿಚಾರಗಳ ಸಮ್ಮಿಶ್ರಿತ ಸಂಕಲನವಾಗಿ ಕೃತಿ ಮೂಡಿ ಬಂದಿದೆ. 'ರಾಜುಕವಿ' ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಸ್ವತಃ ಕವಿಯಾಗಿರುವ ರಾಜು ಸೂಲೇನಹಳ್ಳಿ ಅವರು, ಹನಿಗವಿತೆಗಳ ಆಯ್ಕೆಯಲ್ಲಿ ಎಡವಿದ್ದಾರೆ ಅನಿಸಿದರೂ, ಪ್ರಸ್ತುತ ಕೃತಿಯ ಸಂಪಾದಕರಾಗಿ, ಎಲೆಮರೆಯಲ್ಲಿ ಅವಿತ ಹೂಗಳಂತಹ ಪ್ರತಿಭೆಗಳನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುವ ದೃಷ್ಟಿಯಿಂದ ಪ್ರಸ್ತುತ ಕೃತಿಯನ್ನು ತಮ್ಮದೇ ಸಂಸ್ಥೆಯಾದ ತನುಶ್ರೀ ಪ್ರಕಾಶನದಿಂದ ಪ್ರಕಟಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಸಾಹಿತ್ಯ ಸೃಷ್ಟಿ, ಸಂಘಟನೆ, ಪುಸ್ತಕ ಪ್ರಕಟಣೆ, ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯದ ಪರಿಚಾರಕರಾಗಿ ಹೊರಹೊಮ್ಮುತ್ತಿರುವುದು, ಇತರರಿಗೂ ಮಾದರಿಯಾಗುವುದರ ಜೊತೆಗೆ, ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆಗಳು ದಕ್ಕಲಿ” ಎಂದು ಹೇಳಿದ್ದಾರೆ.

About the Author

ಎಸ್. ರಾಜು ಸೂಲೇನಹಳ್ಳಿ
(01 June 1988)

ಲೇಖಕ ಎಸ್. ರಾಜು ಸೂಲೇನಹಳ್ಳಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರದ ಸೂಲೇನಹಳ್ಳಿ ಗ್ರಾಮದವರು. ಎಂ. ಎ., ಬಿ. ಈಡಿ, ಡಿ. ಈಡಿ. ಹಾಗೂ ಎಂ.ಫಿಲ್ ಪದವೀಧರರು. ಪ್ರಸ್ತುತ ಎಸ್. ಜೆ. ಎಂ. ವಿದ್ಯಾಸಂಸ್ಥೆ ಯ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಸಾಹಿತ್ಯ ಮತ್ತು ಸಂಘಟನೆ, ಕತೆ, ಕಾದಂಬರಿ, ಲೇಖನ, ಕವನ ಹಾಗೂ ಸಂಶೋಧನಾ ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರು, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರು. ಕೃತಿಗಳು: ಪ್ರೇಮದ ಹಣತೆ (ಚಲನಚಿತ್ರಕ್ಕೆ ಆಯ್ಕೆಯಾದ ಕಾದಂಬರಿ, ಹಿಂದಿ, ತೆಲುಗು  ಭಾಷೆಗೂ ...

READ MORE

Related Books