About the Author

ಲೇಖಕ ಎಸ್. ವೆಂಕಟೇಶ ಅವರು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರು. ಪ್ರವೃತ್ತಿಯಲ್ಲಿ ಅವರು ನಟ, ನಾಟಕಕಾರ, ಸಾಹಿತಿ, ನಿರ್ದೇಶಕರು. ಇಂಡಿಯನ್ ಎಪಿಲೆಪ್ಸಿ ಅಸೋಷಿಯೇಶನ್ ಸ್ಥಾಪಿಸಿ, ಜನಸಮೂಹದಲ್ಲಿ ಅಪಸ್ಮಾರ (ಮೂರ್ಚೆ ರೋಗ) ಕುರಿತು ರಂಗನಾಟಕ ಹಾಗೂ ಬೀದಿನಾಟಕಗಳ ಮೂಲಕ ಶ್ರಮಿಸುತ್ತಿದ್ದಾರೆ. ಸ್ಕಿಜೊಫ್ರೇನಿಯಾ, ಪಾರ್ಕಿನ್ ಸನ್ ಡಿಸೀಸ್, ಪ್ಯಾರಾಲೆಸಿಸ್ ಸ್ಟ್ರೋಕ್, ಖಿನ್ನತೆ ಹಾಗೂ ಲೈಂಗಿಕ ತಪ್ಪು ತಿಳಿವಳಿಕೆ ವಿರುದ್ಧ ಜಾಗೃತಿ ಮೂಡಿಸಲು ನಾಟಕಗಳನ್ನು ರಚಿಸಿ ಅಭಿನಯಿಸಿದ್ದಾರೆ.

ಕೃತಿಗಳು: ಮನೋಲೋಕದ ಮಧ್ಯದೊಳಗೆ (ವೃತ್ತಿಯ ಹಾಗೂ ನೈಜ ಘಟನೆ ಆಧರಿತ ಅನುಭವಗಳ ಸಂಕಲನ), ಮಾನಸ ಸರೋವರ, ಮೃತ್ಯುಂಜನ ಮಡಿಲಲ್ಲಿ (ಪ್ರವಾಸ ಕಥನಗಳು) ಮಿಥ್ಯೆಯ ಬೆನ್ನಟ್ಟಿ (ಅಪಸ್ಮಾರ ರೋಗ ಹಾಗೂ ಅವರೊಂದಿಗಿನ ಅನುಭವಗಳ ಸಂಕಲನ)

‘ಮೃತ್ಯುಂಜನ ಮಡಿಲಲ್ಲಿ’ ಪ್ರವಾಸ ಕಥನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 

ಎಸ್. ವೆಂಕಟೇಶ