About the Author

ಸಚ್ಚಿದಾನಂದ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿ, ಭಾರತ ಮತ್ತು ಯುರೋಪ್‌ಗಳಲ್ಲಿ ಅವರ ಉನ್ನತ ಶಿಕ್ಷಣ. ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿ ತಮ್ಮ ವೃತ್ತಿ ಮುಂದುವರಿಸಿ ಈಗ ಚೀನಾ ದೇಶದ ಕಾರ್ ಡಿಸೈನ್ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲೇ ವಾಸವಾಗಿದ್ದಾರೆ.

'ಕಾರಂತಜ್ಜನಿಗೊಂದು ಪತ್ರ' ಅವರ ಮೊದಲ ಕಥಾ ಸಂಕಲನ, ಯಕ್ಷಗಾನ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ, 'ಮಹಾಬಲ'ದ ಸಹ ಲೇಖಕರು. ಅವರ ಮೊದಲ ಕಥಾ ಸಂಕಲನದ 'ಕಾರಂತಜ್ಜನಿಗೊಂದು ಪತ್ರ' ಕಥೆ ಚಲನಚಿತ್ರವಾಗಿದೆ. ಹಾಗೂ ಅದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಅರಳು ಪ್ರಶಸ್ತಿ' ಮತ್ತು 'ಪುಸ್ತಕ ದತ್ತಿ ಪ್ರಶಸ್ತಿ', 'ಅತ್ತಿಮಬ್ಬೆ ಪ್ರಶಸ್ತಿ' 'ಕಥಾರಂಗ ಪ್ರಶಸ್ತಿ' 'ಪಂ|| ಪುಟ್ಟರಾಜ ಗವಾಯಿ ಸಾಹಿತ್ಯ ಪುರಸ್ಕಾರ ದೊರೆತಿದೆ.

 

ಸಚ್ಚಿದಾನಂದ ಹೆಗಡೆ

BY THE AUTHOR