ಕಾರಂತಜ್ಜನಿಗೊಂದು ಪತ್ರ

Author : ಸಚ್ಚಿದಾನಂದ ಹೆಗಡೆ

Pages 160

₹ 60.00
Year of Publication: 2008
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76
Phone: 9880447053

Synopsys

ಲೇಖಕ ಸಚ್ಚಿದಾನಂದ ಹೆಗಡೆ ಅವರ ಕಥೆಗಳ ಸಂಕಲನ - ’ಕಾರಂತಜ್ಜನಿಗೊಂದು ಪತ್ರ’. ಕೃತಿಗೆ ಬೆನ್ನುಡಿ ಬರೆದಿರುವ ವಿವೇಕ ಶಾನಭಾಗ ಅವರು, ಆಧುನಿಕತೆಯೊಡನೆಯ ಸೆಣಸಾಟವು ಎಲ್ಲ ಕಾಲದ ಲೇಖಕರು ಎದುರಿಸಿದ ಸವಾಲಾಗಿದೆ. ಈ ಕೃತಿಯಲ್ಲಿ ಬಾಹ್ಯಲೋಕದ ಬದಲಾವಣೆ ತಕ್ಷಣ ಕಣ್ಣಿಗೆ ಬೀಳುತ್ತದೆ. ಆದರೆ ಮನುಷ್ಯ ಸಂಬಂಧಗಳ ಆಂತರಿಕ ಸ್ವರೂಪ ಮತ್ತು ಮೌಲ್ಯಗಳ ಪಲ್ಲಟ ಅಷ್ಟು ಸುಲಭ ಗ್ರಾಹ್ಯವಲ್ಲ. ಮತ್ತು, ಇದು ಬಹಳ ವೇದನಾಭರಿತವಾದದ್ದು. ಸಚ್ಚಿದಾನಂದ ಹೆಗಡೆಯವರ ಕತೆಗಳು ಈ ರೂಪಾಂತರವನ್ನು ಬಗೆಬಗೆಯಲ್ಲಿ ಎದುರಿಸಲು, ಅರ್ಥೈಸಲು ಮಾಡಿದ ಪ್ರಾಮಾಣಿಕ ಪ್ರಯತ್ನಗಳಾಗಿವೆ. ತಮ್ಮ ಮೊದಲ ಸಂಕಲನದಲ್ಲಿಯೇ ಅವರು ಈವತ್ತಿನ ಮಹತ್ವದ ಬಿಕ್ಕಟ್ಟುಗಳನ್ನು ಎದುರಿಸುವ ಧೈರ್ಯವನೂ, ಸಂಕಲ್ಪವನ್ನೂ ತೋರಿಸಿದ್ದಾರೆ, ಬಹುಮುಖ್ಯವಾದ ಸಂಗತಿಯೆಂದರೆ, ಬದಲಾವಣೆಯ ಬಗ್ಗೆ ಹಳಹಳಿಕೆಯಿಲ್ಲದ ದೃಷ್ಟಿಕೋನ. ಇದರಿಂದಾಗಿ ಅನುಭವಗಳ ಆರೋಗ್ಯಪೂರ್ಣ ಮರುಸೃಷ್ಟಿ ಸಾಧ್ಯವಾಗಿದೆ. ವಸ್ತುವಿನ ವೈವಿಧ್ಯತೆ, ಕಥನದ ಕುಶಲತೆ, ನಿರ್ಣಾಯಕ ನೋಟ ಹೇರಲು ಅವಸರ ಪಡದ ಆರೋಗ್ಯಪೂರ್ಣ ಜೀವನದೃಷ್ಟಿಯುಳ್ಳ ಈ ಕತೆಗಳು ಓದುಗರಿಗೆ ಮುದವನೂ, ವಿಚಾರ ಪ್ರಚೋದನೆಯನ್ನೂ ಕೊಡುವಂಥವು’ ಎಂದು ಪ್ರಶಂಸಿಸಿದ್ದಾರೆ..

About the Author

ಸಚ್ಚಿದಾನಂದ ಹೆಗಡೆ

ಸಚ್ಚಿದಾನಂದ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿ, ಭಾರತ ಮತ್ತು ಯುರೋಪ್‌ಗಳಲ್ಲಿ ಅವರ ಉನ್ನತ ಶಿಕ್ಷಣ. ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿ ತಮ್ಮ ವೃತ್ತಿ ಮುಂದುವರಿಸಿ ಈಗ ಚೀನಾ ದೇಶದ ಕಾರ್ ಡಿಸೈನ್ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲೇ ವಾಸವಾಗಿದ್ದಾರೆ. 'ಕಾರಂತಜ್ಜನಿಗೊಂದು ಪತ್ರ' ಅವರ ಮೊದಲ ಕಥಾ ಸಂಕಲನ, ಯಕ್ಷಗಾನ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ, 'ಮಹಾಬಲ'ದ ಸಹ ಲೇಖಕರು. ಅವರ ಮೊದಲ ಕಥಾ ಸಂಕಲನದ 'ಕಾರಂತಜ್ಜನಿಗೊಂದು ಪತ್ರ' ಕಥೆ ಚಲನಚಿತ್ರವಾಗಿದೆ. ಹಾಗೂ ಅದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಅರಳು ಪ್ರಶಸ್ತಿ' ...

READ MORE

Related Books