About the Author

ಹೆಸರು ಸಚಿನ್ ತೀರ್ಥಹಳ್ಳಿ ಅವರು ಮೂಲತಃ ತೀರ್ಥಹಳ್ಳಿಯವರು. ತೀರ್ಥಹಳ್ಳಿ ತಾಲೂಕಿನ ಈಚಲಬಯಲು ಅನ್ನುವ ಹದಿನೈದೇ ಮನೆಗಳಿರುವ ಊರಲ್ಲಿ ಹುಟ್ಟಿ ಬೆಳೆದಿದ್ದು. ಬೆಂಗಳೂರಿನ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್ ಓದಿ , ಸದ್ಯ ಇನ್ಫೋಸಿಸ್ ನಲ್ಲಿ ಪೈಥಾನ್ ಡೆವೆಲವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ‌ ಪ್ರೇಮದ ಗುಂಗು ಮತ್ತು ನಿಸರ್ಗದ ಮೌನವೇ ಬರೆಯೋಕೆ ಪ್ರೇರಣೆ ಎನ್ನುವ ಸಚಿನ್, ಕುವೆಂಪು , ಕಾರಂತ, ಅನಂತಮೂರ್ತಿ , ತೇಜಸ್ವಿ, ಮಾರ್ಕ್ವೆಜ್ ಅವರನ್ನು ಇಷ್ಟ ಪಟ್ಟು ಓದುತ್ತಾರೆ.

ಕಾವ್ಯ ಓದೋಕೆ ಇಷ್ಟ, ಬರೆಯುವ ಸಾಹಸ ಮಾಡಲ್ಲ ಎನ್ನುವ ಅವರು  ಥಿಯೇಟರಿಗೇ ಹೋಗಿ‌‌ ಸಿನಿಮಾ‌‌ ನೋಡುವುದು, ಬೈಕೆತ್ತಿ‌ ಬೆಂಗಳೂರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು, ಕತೆಗಳಲ್ಲಿ ಕಳೆದು ಹೋಗುವುದು , ಚಿತ್ರಕತೆ ಬರೆಯುವುದು ಮತ್ತು ಕೋಡಿಂಗ್‌ ..ಇವಿಷ್ಟು ನನ್ನ ಆಸಕ್ತಿ ಎನ್ನುತ್ತಾರೆ. ಅವರ ಹಲವು ಕಥೆಗಳು, ಲೇಖನಗಳು ಕನ್ನಡದ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಸಣ್ಣ ಕತೆಗಳ ಸಂಕಲನ 'ನವಿಲು ಕೊಂದ ಹುಡುಗ' ಪ್ರಕಟಗೊಂಡಿದೆ. 

ಸಚಿನ್ ತೀರ್ಥಹಳ್ಳಿ

(24 Apr 1992)

BY THE AUTHOR