About the Author

ಸಂಗಪ್ಪ ನಾಗಲಾಪುರ ಅವರು ನಾಗಲಾಪುರ ಮನೆತನದ ಷಡಕ್ಷರಪ್ಪ ಮತ್ತು ಈರಮ್ಮ ಇವರ ಎಂಟು ಮಂದಿ ಮಕ್ಕಳಲ್ಲಿ ಐದನೆಯವರಾಗಿ ಹುಟ್ಟಿದರು. ಇವರಲ್ಲಿ ಐದು ಮಂದಿ ಗಂಡುಮಕ್ಕಳು ಮತ್ತು ಮೂವರು ಹೆಣ್ಣಮಕ್ಕಳು. ಸಂಗಪ್ಪ ನಾಗಲಾಪುರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮುದಗಲ್ಲು ನಗರದ ಹಳೆಪೇಟೆಯಲ್ಲಿ ತಾರೀಕು ಜನವರಿ 2,1947ರಂದು. ಅವರು ತಮ್ಮ ತಂದೆಯವರನ್ನು ಅವರ 13ನೆ ವಯಸ್ಸಿನಲ್ಲಿ ಕಳೆದುಕೊಂಡರು. ಹತ್ತನೆ ತರಗತಿವರೆಗೆ ಶಿಕ್ಷಣವನ್ನು ನಡೆಸಿ ಎಸ್.ಎಸ್.ಎಲ್.ಸಿ. ಪಾಸಾದರು. ಆನಂತರ ಕೆಲಕಾಲ ಅವರ ಸಹೋದರನ ಜೊತೆ ಸಂತೆಯಲ್ಲಿ ಕಾಳು-ಕಡಿ ಮಾರುತ್ತಿದ್ದರು. ಬೆಂಗಳೂರಿಗೆ ಹೋಗಿ ಹೋಟೆಲಿನಲ್ಲಿ ಕೆಲಕಾಲ ಕೆಲಸ ಮಾಡಿದರು. ಬೆಂಗಳೂರಿನಿಂದ ಗೋವಾಕ್ಕೆ ಹೋಗಿ ಭಾರತೀಯ ಸೇನೆಯನ್ನು ಸೇರಿದರು.

ಭಾರತೀಯ ಸೇನೆಯಲ್ಲಿ ಸಿಗ್ನಲ್ ಮ್ಯಾನ್ ಆಗಿ ಹದಿಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1976ರಲ್ಲಿ ಸೇವಾನಿವೃತ್ತಿಯನ್ನು ಪಡೆದರು. 1973ರಲ್ಲಿ ಮೀನಾಕ್ಷಮ್ಮ ಅವರ ಜೊತೆ ಮದುವೆಯಾದರು. ಅವರ ಮದುವೆ ರಾಯಚೂರು ಜಿಲ್ಲೆಯ ತೀರ್ಥಬಾವಿ ಅಮರೇಶ್ವರದಲ್ಲಿ ನಡೆಯಿತು. ಅವರಿಗೆ ವೀರೇಶ ನಾಗಲಾಪುರ, ಜೈ ಪ್ರಕಾಶ ಮತ್ತು ಮಹಾಂತೇಶ್ ಎಂಬ ಮೂವರು ಗಂಡುಮಕ್ಕಳು. ವೀರೇಶ ಅವರ ಹೆಂಡತಿ ಕವಿತಾ, ಜೈ ಪ್ರಕಾಶ್ ಅವರ ಹೆಂಡತಿ ಶ್ರೀದೇವಿ. ಇವರಿಗೆ ಸುಜನ್, ಸ್ಪೂರ್ತಿ, ಪ್ರಜ್ವಲ್ ಮತ್ತು ಶ್ರದ್ಧಾ ಎಂಬ ನಾಲ್ಕು ಮಂದಿ ಮೊಮ್ಮಕ್ಕಳು ಇದ್ದಾರೆ. ಆನಂತರ ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸಕ್ಕೆ ಸೇರಿ ಇಪ್ಪತ್ತೆಂಟು ವರುಷಗಳ ಕಾಲ ಸೆಕ್ಯುರಟಿ ಇನ್ಸ್ಪೆಕ್ಟರ್ ಆಗಿ ಕೆಲಸವನ್ನು ಮಾಡಿದರು. ಅಲ್ಲಿಂದ 2007ರಲ್ಲಿ ನಿವೃತ್ತಿಯನ್ನು ಪಡೆದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ.

ಸಂಗಪ್ಪ ನಾಗಲಾಪುರ

(02 Jan 1947)