About the Author

ಅಧ್ಯಾಪಕ ವೃತ್ತಿಯೊಂದಿಗೆ ಸೃಜನಶೀಲ ನಾಟಕ ಬರವಣಿಗೆ, ನಿರಂತರ ರಂಗ ಪ್ರಯೋಗ ಹೀಗೆ ನಾನಾ ಪ್ರವೃತ್ತಿಗಳಲ್ಲಿ ಬಿಡುವಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡವರು ಸಾಸ್ವೆಹಳ್ಳಿ ಸತೀಶ್. ಶಿವಮೊಗ್ಗದವರು. (ಜನನ: 1967 ಜನೆವರಿ 27) ‘ಏಕಲವ್ಯ, ಕನಸಿನವರು, ಧನ್ವಂತರಿ ಚಿಕಿತ್ಸೆ, ದೇವರ ಹೆಣ, ಮದಗದ ಕೆಂಚವ್ವ, ಮೃತ್ಯು, ಕಡಿದಾಳು ಶಾಮಣ್ಣ, ಭಳಾರೆ ವಿಚಿತ್ರಂ!’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

‘ನಾಗನ ಕಥೆ, ದೇವರ ಹೆಣ, ಕೆಂಡದ ಮಳೆ ಕರೆವಲ್ಲಿ ಉದಕವಾದವರ ಕಥೆ, ಸಂಸ್ಕಾರ, ಬೆಟ್ಟದಾಚೆ’ ಮುಂತಾದ ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ.  ‘ಕರ್ಣ’ ಹಾಗೂ ‘ದಾರಾಶಿಕೋ’ ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಲವು ಬಾರಿ ಉತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. 40ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದು, ಪ್ರಸಾಧನ, ರಂಗಸಜ್ಜಿಕೆ, ಸಂಗೀತ ವಿಭಾಗಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಡಿದಾಳು ಶಾಮಣ್ಣ ನಾಟಕವನ್ನು ಅವರು ನಿರ್ದೇಶಿಸಿದ್ದಾರೆ.

ಸಾಸ್ವೆಹಳ್ಳಿ ಸತೀಶ್

(27 Jan 1967)

Comments