About the Author

ಪ್ರೊ. ಎಸ್‌.ಬಿ. ರಂಗನಾಥ್ ಅವರು‌ ಸೃಜನಶೀಲ ಬರವಣಿಗೆಯೊಂದಿಗೆ ಬಹುಕಾಲ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುತ್ತಿರುವ ಪ್ರಮುಖ ಲೇಖಕರಲ್ಲಿ ಒಬ್ಬರು. ಇವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರ ಖ್ಯಾತ ಐತಿಹಾಸಿಕ ಅನುವಾದಿತ ಕಾದಂಬರಿ ʻಟಿಪ್ಪು ಸುಲ್ತಾನನ ಖಡ್ಗʼ ಕೃತಿಯು ಮೂರು ಭಾರಿ ಮರು ಮುದ್ರಣಗಳನ್ನು ಕಂಡಿದೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ ಬಂಗಾಳಿ ಚಲನಚಿತ್ರಗಳ ಮೂಲ ಕಾದಂಬರಿಗಳು, ತಕಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್‌ ಮುಂತಾದವರ ಕತೆಗಳನ್ನು ಕನ್ನಡಿಸಿದ್ದಾರೆ. ಅನುವಾದ ಕೃತಿಗಳು: 'ಭುವನ ಸೋಮ್', 'ಪ್ರತಿದ್ವಂದಿ', ಭೀಷ್ಮ ಸಾಹನಿʼ, ʻರಣಹದ್ದುಗಳ ಮಧ್ಯೆʼ, ʻಜಹೂರ್‌ ಭಕ್ಷ್‌ʼ, ʻಎಲೆಲೆ ಮಧುಬಾಲೆ!ʼ, ʻಸಿರಿ ಸಂಚಯʼ, ʻಕಚಗುಳಿ (ಗೆ)! ಕಾಲʼ.

ಎಸ್‌.ಬಿ. ರಂಗನಾಥ್