About the Author

ಶೈನಾ ಶ್ರೀನಿವಾಸ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರು. ಕಲೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ನಾಟಕ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅನೇಕ ನಾಟಕಗಳಲ್ಲಿ ಅಭಿನಯಿಸಿ ಜನಮನ್ನಣೆಯನ್ನು ಪಡೆದಿರುತ್ತಾರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿಯನ್ನು ಪದವಿಯನ್ನು ಪಡೆದಿರುವ ಅವರು, ಬೆಂಗಳೂರಿನ ಬಿಇಎಸ್ ಶಿಕ್ಷಣ ವಿದ್ಯಾಲಯದಲ್ಲಿ ಬಿಎಡ್ ಪದವಿಯನ್ನು ಪಡೆದಿರುತ್ತಾರೆ. ಬಿಎಡ್ ಮುಗಿಯುತ್ತಿದ್ದಂತೆ ಪ್ರೌಢಶಾಲಾ ಶಿಕ್ಷಕ ಗ್ರೇಡ್-2 ವೃಂದದ ಭೌತ ವಿಜ್ಞಾನ ಶಿಕ್ಷಕಿಯಾಗಿ ಉಡುಪಿಯ ಸರ್ಕಾರಿ ಪ್ರಾಥಮಿಕ ಶಾಲೆ ಬೆಳ್ವೆಗೆ ಟಿಜಿಟಿ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾರೆ. ಬೆಂಗಳೂರಿಗೆ ಬಂದ ನಂತರ ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿಯನ್ನು ಹಾಗೂ ಎಮ್ .ಎಡ್ ಅನ್ನು ಚಿನ್ನದ ಪದಕದೊಂದಿಗೆ ತೇರ್ಗಡೆಗೊಳ್ಳುತ್ತಾರೆ. ಪ್ರತಿಲಿಪಿ ಇ-ಮ್ಯಾಗಝಿನ್ ನಲ್ಲಿ ಸರಿಸುಮಾರು 9 ಲಕ್ಷ ಓದುಗರನ್ನು ಹೊಂದಿರುವ ಅವರು ಎಂಟು ಕಾದಂಬರಿಗಳನ್ನು ಇ- ಮ್ಯಾಗ್ಜಿನ್ ನಲ್ಲಿ ಪ್ರಕಟಿಸಿದ್ದಾರೆ. ಕೃತಿಗಳು: ಬೇಟೆ

ಶೈನಾ ಶ್ರೀನಿವಾಸ್ ಶೆಟ್ಟಿ

Books by Author

BY THE AUTHOR