“ಬೇಟೆ” ಕಥಾಸಂಕಲನದಲ್ಲಿ ’ಹದಿನೈದು ಮಕ್ಕಳ ಕತೆಗಳಿದ್ದು’ ಪುರಾಣೇತರ ಇತಿಹಾಸಗಳು ಇದರಲ್ಲಿ ಇಣುಕುತ್ತದೆ. ಇಲ್ಲಿರುವ ಕತೆಗಳು ತುಷಾರ, ವಿಜಯ ಕರ್ನಾಟಕ, ಸಂಜೆ ದರ್ಪಣ, ಲೋಕದರ್ಶನ, ಉದಯವಾಣಿ, ಕರ್ಮವೀರ, ಲೋಕಧ್ವನಿ ವಿಕ್ರಾಂತ, ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು ಭಾಗೀರಥಿಯವರ ಐದನೆಯ ಸಂಕಲನವಾಗಿದ್ದು ಭೀತಿಯ ತುದಿಗಾಲಿನಲ್ಲಿ ಇರಿಸುವ ಯುದ್ಧ, ಹಿಂಸೆಗಳು ಯಾಕಾಗಿ? ರಾಜರುಗಳು ಹಿಂಸಾವಿನೋದಕ್ಕಾಗಿ, ಶೌರ್ಯದ ಹೆಸರಿನಲ್ಲಿ ನಡೆಸುವ ಯುದ್ಧಗಳು ಯಾಕಾಗಿ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ರಚಿಸಿದ್ದಾರೆ. ಮಕ್ಕಳನ್ನು ಮನೋಜ್ಞವಾಗಿ ಹಿಡಿದಿಟ್ಟು ಪ್ರಶ್ನಿಸುವ ಹಲವು ಕಥೆಗಳು ಇಲ್ಲಿವೆ.