About the Author

ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನವರಿ 17 ರಂದು ವಿಜಾಪುರದಲ್ಲಿ. ತಂದೆ ಸಿದ್ದಬಸಪ್ಪ ಗಿಡ್ನವರ, ತಾಯಿ ಭಾಗೀರಥಿ ದೇವಿ. ಚೆನ್ನವೀರ ಕಣವಿಯವರ ಸಹಧರ್ಮಿಣಿ,  ಧಾರವಾಡದಲ್ಲಿ ವಾಸವಿದ್ದವರು. 

ಪ್ರಕಟಿತ ಕೃತಿಗಳು: ಸಂಜೆ ಮಲ್ಲಿಗೆ( 1967), ಬಯಲು ಆಲಯ (1973),ಮರು ವಿಚಾರ ( 1978), ಜಾತ್ರೆ ಮುಗಿದಿತ್ತು (ಸಣ್ಣಕತೆ) 1981, ಕಳಚಿ ಬಿದ್ದ ಪೈಜಣ( 1987),ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು ಎಂಬ ಕಥಾಸಂಕಲನಗಳು ಹೊರಬಂದಿವೆ. 

ಹರಟೆ ಸಾಹಿತ್ಯ ಅಜಗಜಾಂತರ (ಲಲಿತ ಪ್ರಬಂಧ) 1983, ಗುಣ ಶಿವಯೋಗಿ (ಜೀವನ ಚರಿತ್ರೆ) 1974, ಹಾಗೂ ಸಂಪಾದನೆ - ಪ್ರಶಾಂತ ಎಂಬ ಮಕ್ಕಳ ಸಾಹಿತ್ಯವೂ ಇವೆ. 

ಶಾಂತಾದೇವಿ ಕಣವಿ ಅವರಿಗೆ ಬಯಲು ಆಲಯ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1987) ಹಾಗೂ 2009ರ ರಾಜ್ಯ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿ ಸಂದಿದೆ.

ಶಾಂತಾದೇವಿ ಕಣವಿ

(17 Jan 1933)