About the Author

ಎಂ.ಎ., ಎಂ.ಎಡ್.  ಪದವೀಧರರಾಗಿರುವ ಶಾರದಾ ಮುಳ್ಳೂರು  ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ಜಮಖಂಡಿಯಲ್ಲಿ ಜನಿಸಿದ ಶಾರದಾ ತಂದೆ  ಶಂಕರಗೌಡ ಚಿಕ್ಕನಗೌಡರ, ತಾಯಿ- ಇಂದುಮತಿ.

ಏಕಾಂಗಿ (ಕವನ ಸಂಕಲನ), ಆರದ ದೀಪದ ಆಸರೆ ಹಿಡಿದು (ಕವನ ಸಂಕಲನ), ನೀರಜ, ಮಕ್ಕಳ ಕವನಗಳು, ಕನ್ನಡಿ (ಚುಟುಕುಗಳ ಸಂಕಲ), ಮಂದಹಾಸ (ಜಪಾನಿ ಹಾಯಿಕುಗಳ ಸಂಕಲನ), ಆರೂಢ ಪರಂಪರೆ (ಕನ್ನಡ ವಿಶ್ವವಿದ್ಯಾಲಯ ಹಂಪಿ), ಹೈದ್ರಾಬಾದ ಕರ್ನಾಟಕದ ಕಾದಂಬರಿ ಕಾರ್ತಿಯರು (ಅಚ್ಚಿನಲ್ಲಿ) ಗುಲಬರ್ಗಾ ವಿಶ್ವವಿದ್ಯಾಲಯ), ಡಾ. ಬಸವರಾಜ ಸಬರದ : ಕಾವ್ಯ ಅವಲೋಕನ, ಗುಲಬರ್ಗಾ ವಿಶ್ವವಿದ್ಯಾಲಯ, (ಪ್ರಸಾರೋಪನ್ಯಾಸ) . ಸಂಪಾದಿತ ಕೃತಿ: ತ್ರಿವೇಣಿ ಮತ್ತು ಕೊಡಗಿನ ಗೌರಮ್ಮ ಬದುಕು-ಬರಹ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು), ರಾವಬಹದೂರ ಸಾಹಿತ್ಯ ಅವಲೋಕನ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು), ಡಾ. ಸ. ಜ. ನಾಗಲೋಟಮಠ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು), ದಾಸ ಸಾಹಿತ್ಯ ನಿತ್ಯನೂತನ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು), ಹತ್ತರೊಳಗೆ (ಮಕ್ಕಳು ಬರೆದ ಕವಿತೆಗಳು) ಪ್ರಕಟಿತ ಕೃತಿಗಳು.

ಗೋದಾವರಿ ಕಾವ್ಯ ಪುರಸ್ಕಾರ (ಸಮೀರವಾಡಿ ಸಕ್ಕರೆ ಕಾರ್ಖಾನೆ), ಮಕ್ಕಳ ಮನೆ, ಬೆಂಗಳೂರು ಕೃತಿರತ್ನ' ಪ್ರಶಸ್ತಿ, ರಾಜ್ಯಮಟ್ಟದ ಅತ್ಯುತ್ತಮ ಸಂಘಟಕಿ (ನಂದನ ಬೆಂಗಳೂರು), ಜನಮೆಚ್ಚಿದ ಶಿಕ್ಷಕಿ (ಕರ್ನಾಟಕ ಸರಕಾರ), ಕಾಯಕಯೋಗಿ ಸನ್ಮಾನ (ಖಾಸಗಿ ಸಂಸ್ಥೆ ಬೀಳಗಿ), ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಪುಸ್ತಕ ಬಹುಮಾನ (ಕೃತಿ: ಮಂದಹಾಸ), ಸಂಕ್ರಮಣ ಕಾವ್ಯ ಪುರಸ್ಕಾರ - ಬೆಂಗಳೂರು, ಅತ್ಯುತ್ತಮ ಸಮಾಜ ಸೇವಕಿ ಪ್ರಶಸ್ತಿ, ರಾಜ್ಯಮಟ್ಟದ ಜಾನಪದ ಸಂಗೀತೋತ್ಸವ. ಇತರೆ: ರಾಜ್ಯ ಮಕ್ಕಳ ಸಾಹಿತ್ಯ ಘಟಕ: ತಾಲೂಕಾ ಅಧ್ಯಕ್ಷೆ, ಸಂಘಟನಾ ಕಾರ್ಯದರ್ಶಿ: ಮಕ್ಕಳ ಸಾಹಿತ್ಯ ಅಕಾಡೆಮಿ ಹಕ್ಕೊತ್ತಾಯ ಸಮಿತಿ, ಧಾರವಾಡ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶಾರದಾ ಮುಳ್ಳೂರ

Books by Author