ನೀರಜ

Author : ಶಾರದಾ ಮುಳ್ಳೂರ

Pages 75

₹ 50.00
Published by: ವಿನಯ ಪ್ರಕಾಶನ
Address: ಬೆಂಗಳೂರು

Synopsys

‘ನೀರಜ’ ಕೃತಿಯು ಶಾರದಾ ಮುಳ್ಳೂರ ಅವರ ಕವನಸಂಕಲನವಾಗಿದೆ. ಶಿಶು ಪದ್ಯಗಳ ವಸ್ತು ನಿತ್ಯದ ಸಹಜ ಸಂಗತಿಗಳು ಇಲ್ಲಿಯ ವಸ್ತು. ಮಗುವಿಗೆ ಕಥೆಯನ್ನು ಸರಳವಾಗಿ ಹೇಳುವಂತೆ ಇಲ್ಲಿ ಅವನ್ನು ಪುಟ್ಟ ಕವಿತೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ನೀರಜ ನೀನು ಬಾಯ್ದೆರೆದೆ/ಅಲ್ಲಿ ಬ್ರಹ್ಮಾಂಡವಿರಲಿಲ್ಲ / ಮಣ್ಣಿತ್ತು, ಕಲ್ಲಿತ್ತು, ನೀರಿತ್ತು, ಕಾಳಿತ್ತು/ – ಇಂತಹ ಚಿಕ್ಕ ಚಿಕ್ಕ ರೂಪಕಗಳು ರೇಖಾ ಚಿತ್ರಗಳೊಂದಿಗೆ ಮಕ್ಕಳ ಗಮನವನ್ನು ಥಟ್ಟನೆ ಸೆಳೆಯುವಂತಿವೆ. ಕವಿತೆಗಳನ್ನು ಮತ್ತಷ್ಟು ಧ್ವನಿ ಪೂರ್ಣವಾಗಿಸಿರುವುದು ಇಲ್ಲಿನ ಶಿವ ಹೂಗಾರರ ರೇಖಾ ಚಿತ್ರಗಳನ್ನು ಇಲ್ಲಿ ಕಾಣಬಹುದು. ವಾತಾವರಣದ ತುಂಬ ಮಧುರತೆ ತುಂಬಿದೆ / ಬಹುಶಃ ನೀನೆಲ್ಲೋ ಮಾತನಾಡುತ್ತಿರಬಹುದು / – ಸಹಜ ಸೌಂದರ್ಯದ ಇಂತಹ ಹೈಕುಗಳಿಂದ `ಮಂದಹಾಸ‘ ಬೀರುತ್ತದೆ. ಹೈಕುಗಳ ಬಗ್ಗೆ ನಮ್ಮಲ್ಲಿ ಆಕರ್ಷಣೆ ಹುಟ್ಟಿಸುವಷ್ಟು ಸರಳವಾದ ರೂಪಕಗಳು ಇವು. `ಕನ್ನಡಿ‘ ಸಂಕಲನದಲ್ಲೂ ಇಂತಹದೇ ಚುಟುಕುಗಳಿದ್ದರೂ ಒಂದು ಸಾಲು ಅಥವಾ ಒಂದು ಶಬ್ದದ ಮೂಲಕ ಅನುಪಮವಾದ ಅರ್ಥ ಸ್ಫೋಟಿಸುವ ಹೈಕುಗಳ ವಿಶಿಷ್ಟತೆಯನ್ನು ಮನಗಾಣಿಸಲೆಂದೇ ಚುಟುಕು ಮತ್ತು ಹೈಕುಗಳು ಎಂದು ಪ್ರತ್ಯೇಕವಾಗಿ ಹೆಸರಿಸಲಾಗಿದೆ.

About the Author

ಶಾರದಾ ಮುಳ್ಳೂರ

ಎಂ.ಎ., ಎಂ.ಎಡ್.  ಪದವೀಧರರಾಗಿರುವ ಶಾರದಾ ಮುಳ್ಳೂರು  ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ಜಮಖಂಡಿಯಲ್ಲಿ ಜನಿಸಿದ ಶಾರದಾ ತಂದೆ  ಶಂಕರಗೌಡ ಚಿಕ್ಕನಗೌಡರ, ತಾಯಿ- ಇಂದುಮತಿ. ಏಕಾಂಗಿ (ಕವನ ಸಂಕಲನ), ಆರದ ದೀಪದ ಆಸರೆ ಹಿಡಿದು (ಕವನ ಸಂಕಲನ), ನೀರಜ, ಮಕ್ಕಳ ಕವನಗಳು, ಕನ್ನಡಿ (ಚುಟುಕುಗಳ ಸಂಕಲ), ಮಂದಹಾಸ (ಜಪಾನಿ ಹಾಯಿಕುಗಳ ಸಂಕಲನ), ಆರೂಢ ಪರಂಪರೆ (ಕನ್ನಡ ವಿಶ್ವವಿದ್ಯಾಲಯ ಹಂಪಿ), ಹೈದ್ರಾಬಾದ ಕರ್ನಾಟಕದ ಕಾದಂಬರಿ ಕಾರ್ತಿಯರು (ಅಚ್ಚಿನಲ್ಲಿ) ಗುಲಬರ್ಗಾ ವಿಶ್ವವಿದ್ಯಾಲಯ), ಡಾ. ಬಸವರಾಜ ಸಬರದ : ಕಾವ್ಯ ಅವಲೋಕನ, ಗುಲಬರ್ಗಾ ವಿಶ್ವವಿದ್ಯಾಲಯ, (ಪ್ರಸಾರೋಪನ್ಯಾಸ) . ಸಂಪಾದಿತ ಕೃತಿ: ತ್ರಿವೇಣಿ ಮತ್ತು ಕೊಡಗಿನ ಗೌರಮ್ಮ ಬದುಕು-ಬರಹ ...

READ MORE

Related Books