About the Author

ಹಿರಿಯ ಸಾಹಿತಿ, ಪ್ರಕಾಶನ ಶಿವಾನಂದ ಗಾಳಿ ಅವರು ಮೂಲತಃ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದವರು. ತಂದೆ -ಶಾಂತಪ್ಪ ಹಾಗೂ ತಾಯಿ-ಸುಂದರಮ್ಮ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದರೊಂದಿಗೆ ‘ಮಿರ್ಜಿ ಅಣ್ಣಾರಾಯರ ಬದುಕು-ಸಾಹಿತ್ಯ’ ಕುರಿತು ಡಾ. ಗುರುಲಿಂಗ ಕಾಪಸೆಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದ ಅವರು ನರಗುಂದದ ಸಿದ್ಧೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ವತ್ತಿ ಪ್ರಾರಂಭಿಸಿದರು. ನಂತರ ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ, ಸಿಲೆಕ್ಷನ್ ಗ್ರೇಡ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 1999ರಿಂದ 2006ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರವಾಚಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ವಿಭಾಗದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ, ಸಂಯೋಜಕರಾಗಿ, ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಾಂಗದ (ಪ್ರಭಾರ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಧ್ಯಾಪಕ ವೃತ್ತಿಯೊಂದಿಗೆ ಸುಂದರ ಪ್ರಕಾಶನ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾಲ್ಕು ಅವಧಿಗೆ ಅಧ್ಯಕ್ಷರಾಗಿದ್ದ ಅವರು ಧಾರವಾಡ ಜಿಲ್ಲಾ ಒಂಬತ್ತನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಪಡೆದಿದ್ದಾರೆ.

ಶಿವಾನಂದ ಗಾಳಿ

(01 Feb 1946-04 Mar 2018)