About the Author

ಡಾ.ಸೋಮನಾಥ ಯಾಳವಾರ ಅವರ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ. ತಂದೆ ಸಿದ್ದಪ್ಪ ತಾಯಿ ಶಿವಾನಂದಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾರಾನಾಳ ಹಾಗೂ ಡಾವಳಗಿಯಲ್ಲಿ ಪ್ರೌಢಶಿಕ್ಷಣ, ಮುದ್ದೇಬಿಹಾಳದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿ.ವಿ.ಯಿಂದ ಎಂ.ಎ ಪಡೆದರು. 1976ರಲ್ಲಿ ಭಾಷಾ ಶಾಸ್ತ್ರದಲ್ಲಿ ಡಿಪ್ಲೊಮ ಪದವಿ ಮುಗಿಸಿದರು. ಧಾರವಾಡದ ಮುರುಘಾಮಠವು ಇವರಿಗೆ ಧಾರ್ಮಿಕ -ಅಧ್ಯಾತ್ಮಿಕ ಶಿಕ್ಷಣ ನೀಡಿತು. 1995ರಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ (1995)  ಪದವಿ ಪಡೆದರು.

ಕೆಲವು ವರುಷ ಕಾಲ ಆಲಮಟ್ಟಿ ಆಣೆಕಟ್ಟು ನಿಯಂತ್ರಣ ವಿಭಾಗದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.ತದನಂತರ ಹುಮನಾಬಾದ ತಾಲೂಕಿನ ಬಸವತೀರ್ಥ ಚೆನ್ನಬಸವ ಸ್ವಾಮೀಜಿ ಕಲಾ ಹಾಗೂ ಶ್ರೀ ವೀರಭಧ್ರೆಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಸದ್ಯ, ನಿವೃತ್ತರು. ಬೀದರ ಜಿಲ್ಲೆಯ ದೇಶೀ ಕಲೆಗಳು, ಹುಮನಾಬಾದ ನಾಟಿ ಔಷಧ ಪದ್ಧತಿ ಹಾಗು ಔಷಧಿ ಸಸ್ಯಗಳು, ಶ್ರೀ ಸೀಮಿ ನಾಗಣ್ಣ ಮಹಿಮೆ, ಶರಣ ಸಿರಿ ವಿಷಯವಾಗಿ ಲೇಖನಗಳನ್ನು ಬರೆದಿದ್ದಾರೆ. ಬೀದರನ ಕರ್ನಾಟಕ ಕಾಲೇಜು ಸ್ನಾತಕೊತ್ತರ ಕೇಂದ್ರದಲ್ಲಿ ಗೌರವ ಪ್ರಾಧ್ಯಪಕರಾಗಿದ್ದರು. ಬುದ್ಧ ಅಧ್ಯಯನ ಕೇಂದ್ರ, ಕನ್ನಡ ಜಾಗೃತ ಸಮಿತಿ, ಕನ್ನಡ ಜಾನಪದ ಪರಿಷತ್ತು ಹೀಗೆ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಆಗಿದ್ದಾರೆ. 

ಕೃತಿಗಳು: ಹುಮನಾಬಾದ ತಾಲೂಕ ದರ್ಶನ, ಬೀದರ ಜಿಲ್ಲೆಯ ಶರಣರ ಸ್ಮಾರಕಗಳು, ಬೀದರ ಜಿಲ್ಲಾ ದರ್ಶನ, ಕುಂಬಾರ ಗುಂಡಯ್ಯ, ಕಾರಾಕನಳ್ಳಿ ಬಕ್ಕಪ್ರಭು, ಮಾಣಿಕ ಪ್ರಭು, ಹುಮ್ನಾಬಾದ ಶ್ರೀ ವೀರಭದ್ರೇಶ್ವರ., ಉರಿಲಿಂಗ ಪೆದ್ದಿ. ಸಂಶೋಧನ ಕೃತಿಗಳು: ಆದಯ್ಯ ಒಂದು ಅಧ್ಯಯನ, ಬೀದರ ಜಿಲ್ಲೆಯ ಶರಣ ಸ್ಮಾರಕಗಳು.,ವಿಮರ್ಶೆ ಕೃತಿಗಳು: ಹರಿಶ್ಚಂದ್ರ ಕಾವ್ಯ ಮತ್ತು ಮೌಲ್ಯಗಳು, ಗಿರಿಜಾ ಕಲ್ಯಾಣ, ಕುಮಾರ ವ್ಯಾಸ,
ಪ್ರಶಸ್ತಿ ಪುರಸ್ಕಾರಗಳು: ಚಿತ್ರದುರ್ಗ ಮುರಘಾಮಠದಿಂದ ಶಿಕ್ಷಕ ರತ್ನ  ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ, ಭಾಲ್ಕಿಯ ಕನ್ನಡ ಸಂಘದಿಂದ ಶ್ರೇಷ್ಠ ಸಾಹಿತಿ ಪ್ರಶಸ್ತಿ,ಹಾಗೂ ಕನ್ನಡ ಸಾಹಿತ್ಯ ಪ್ರಶಸ್ತಿ , ಬೀದರಿನ ರಾಷ್ಟ್ರೀಯ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಕಾರಂಜಿ  ಪ್ರಶಸ್ತಿ, ಬೀದರ ಜಾನಪದ ಪರಿಷತ್ತಿನಿಂದ ಎಚ್. ಎಲ್. ನಾಗೇಗೌಡ ಪ್ರಶಸ್ತಿ, ಬೀದರಿನ ದೇಶಪಾಂಡೆ ಪ್ರತಿಷ್ಠಾನದಿಂದ ಶರಣ ಚೂಡಾಮಣಿ ರತ್ನ ಪ್ರಶಸ್ತಿ , ಗುಲಬರ್ಗಾ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ , ಬೀದರ  ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿಯ ಗೌರವ, 

ಸೋಮನಾಥ ಯಾಳವಾರ

(01 May 1953)