ಜನಪದರು ಕಂಡ ಶರಣರು

Author : ಸೋಮನಾಥ ಯಾಳವಾರ

Pages 142

₹ 160.00




Year of Publication: 2020
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಖಕ ಡಾ. ಸೋಮನಾಥ ಯಾಳವಾರ ಅವರ ಕೃತಿ-ಜನಪದರು ಕಂಡ ಶರಣರು. ಜನಪದ ಸಾಹಿತ್ಯಕ್ಕೂ ಮಾನವನ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ. ಅದು ಮಾನವನು ನೆಲೆನಿಂತ ಸ್ಥಾನ. ನಾಗರಿಕತೆ, ಅವನ ಜೀವನ ಪದ್ಧತಿ,ಸಂಬಂಧಗಳನ್ನು ಕುರಿತು ದಾಖಲಾತಿಗೊಳಿಸುತ್ತ ಬಂದಿದೆ.ಕೃಷಿ ಪ್ರಧಾನವಾಗಿರುವ ಕನ್ನಡನಾಡಿನಲ್ಲಿ ಕೂಡಿ ದುಡಿಯುವುದು, ಕೂಡಿ ಉಣ್ಣುವುದು, ಕೂಡಿ ಬದುಕುವುದು, ನಮ್ಮ ಜನಪದರ ಬದುಕಿನ ಸೂತ್ರವಾಗಿದೆ. ಇವರು ತಮ್ಮ ಜೀವನದುದ್ದಕ್ಕೂ ಜಾತಿ,ಮತ,ಪಂಥ,ಪಂಗಡ,ಮೇಲು ಕೀಳೆನ್ನದೇ ಒಂದಾಗಲಿರುವ ಬದುಕಿನ ಸಾರವೇ ನಮ್ಮ ಸಂಸ್ಕೃತಿ.

ಶರಣರ ವ್ಯಕ್ತಿತ್ವ ಮಹಾನುಭಾವತ್ವ, ತತ್ವ-ಸಿದ್ಧಾಂತ ಹಾಗೂ ಜೀವನಪದ್ಧತಿಯನ್ನು ಕಂಡವರಿಂದ ಕೇಳಿರಬಹುದಾದ ಜನಪದ ಅಜ್ಞಾತ ಕವಿಗಳು ತಮ್ಮದೇ ಆದ ಹಾಡುಗಳ ಪ್ರಕಾರಗಳಲ್ಲಿ,ಕಥೆಗಳಲ್ಲಿ, ಲಾವಣಿಗಳಲ್ಲಿ, ಕಂಡ ಕಾವ್ಯಗಳಲ್ಲಿ, ವಿಶೇಷವಾಗಿ ತ್ರಿಪದಿಯಂಥ ಹಂತಿ ಹಾಡುಗಳಲ್ಲಿ ಹಿಡಿದಿರಿಸಿಕೊಂಡಿದ್ದಾರೆ. ಶ್ರಮಸಂಸ್ಕೃತಿಯ ಶರಣರ ಬದುಕು, ಕಾಯಕ-ದಾಸೋಹ ಪದ್ಧತಿ, ಪ್ರಾಮಾಣಿಕ ಜೀವನ, ಧಾರ್ಮಿಕ ಸಾಮಾಜಿಕ ಸಂಬಂಧಗಳು,ಅವರ ಮಾನವೀಯ ಗುಣಗಳು ದುಡಿಯುವ ವರ್ಗದ ನಮ್ಮ ಜನಪದರಿಗೆ ತುಂಬ ಹಿಡಿಸಿವೆ.

ಈ ಶರಣ ಸಂಸ್ಕೃತಿಯು ಜನಸಾಮಾನ್ಯರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಅಂತೆಯೇ ಶರಣರನ್ನು ಕುರಿತು ಜನಪದ ಸಾಹಿತ್ಯದಲ್ಲಿ ವಿಶೇಷವಾಗಿ ತ್ರಿಪದಿ ರೂಪದ ಹಂತಿ ಹಾಡಿನಲ್ಲಿ ಹರಿಸಿದನ್ನು ಕಾಣಬಹುದು. ಅಂತಹ ತ್ರಿಪದಿಗಳಲ್ಲಿ ಗರತಿಯ ಹಾಡಿನಲ್ಲಿ, ದುಂದುಮೆ ಪದ,ಕೋಲಾಟ ಪದದಲ್ಲಿ ಹಲವು ಶರಣರ ಬದುಕು ವ್ಯಕ್ತಿತ್ವ ಹೇಗೆ ದರ್ಶಿತವಾಗಿದೆ ಎಂಬುದನ್ನು ಇಲ್ಲಿ ಅರಿಯಬಹುದು.

ಈ ಕೃತಿಯಲ್ಲಿ ಒಟ್ಟು 16 ಲೇಖನಗಳು ಇದ್ದು,ಅವು ಅಧ್ಯಯನ ನಿಷ್ಠೆಯಿಂದ ಕೂಡಿದೆ. ಶರಣರ ಬದುಕು ಮತ್ತು ಬೋಧನೆಯನ್ನು ನಮ್ಮ ಜನಪದರು ಸ್ವೀಕರಿಸಿದ ಬಗೆ,ಅದನ್ನು ಆದರ್ಶವಾಗಿಸಿಕೊಂಡು ಹಾಡಿ ಸಂತುಷ್ಟವಾದ ವಿಧಾನವು ಈ ಕೃತಿಯಲ್ಲಿ ವಿವರಿಸಲಾಗಿದೆ. ಬರವಣಿಗೆಯ ರೀತಿಯು, ಜಾನಪದ ಹಾಡುಗಳ ವಿಶ್ಲೇಷಣೆಯೂ ಪರಿಣಾಮಕಾರಿಯಾಗಿದೆ. ಸಂಶೋಧನಾತ್ಮಕ ನೆಲೆಯಲ್ಲಿ ರಚನೆಗೊಂಡ ಈ ಪುಸ್ತಕವು ಓದುಗರಿಗೆ ಸಹಾಯಕಾರಿಯಾಗಲಿದೆ.

About the Author

ಸೋಮನಾಥ ಯಾಳವಾರ
(01 May 1953)

ಡಾ.ಸೋಮನಾಥ ಯಾಳವಾರ ಅವರ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ. ತಂದೆ ಸಿದ್ದಪ್ಪ ತಾಯಿ ಶಿವಾನಂದಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾರಾನಾಳ ಹಾಗೂ ಡಾವಳಗಿಯಲ್ಲಿ ಪ್ರೌಢಶಿಕ್ಷಣ, ಮುದ್ದೇಬಿಹಾಳದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿ.ವಿ.ಯಿಂದ ಎಂ.ಎ ಪಡೆದರು. 1976ರಲ್ಲಿ ಭಾಷಾ ಶಾಸ್ತ್ರದಲ್ಲಿ ಡಿಪ್ಲೊಮ ಪದವಿ ಮುಗಿಸಿದರು. ಧಾರವಾಡದ ಮುರುಘಾಮಠವು ಇವರಿಗೆ ಧಾರ್ಮಿಕ -ಅಧ್ಯಾತ್ಮಿಕ ಶಿಕ್ಷಣ ನೀಡಿತು. 1995ರಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ (1995)  ಪದವಿ ಪಡೆದರು. ಕೆಲವು ವರುಷ ಕಾಲ ಆಲಮಟ್ಟಿ ಆಣೆಕಟ್ಟು ನಿಯಂತ್ರಣ ವಿಭಾಗದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.ತದನಂತರ ಹುಮನಾಬಾದ ತಾಲೂಕಿನ ಬಸವತೀರ್ಥ ಚೆನ್ನಬಸವ ಸ್ವಾಮೀಜಿ ಕಲಾ ...

READ MORE

Related Books