About the Author

ಸಾಹಿತಿ, ಕತೆಗಾರ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಿತರಾದ ಸುಬ್ರಾವ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋಣಿಯವರು. ಹೊಸ ಜನರ ಸಂಸ್ಕೃತಿ-ಪರಿಸರವನ್ನು ಅರಿಯುವ ತುಡಿತವಿದ್ದು ಪೂರಕವಾಗಿ ಸುಬ್ರಾವ ಅವರು ದೇಶ ವಿದೇಶಗಳನ್ನು ಭೇಟಿ ನೀಡುತ್ತಾರೆ.

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ (ಐ.ಟಿ.ಐ) ವಿವಿಧ ಹುದ್ದೆಗಳಲ್ಲಿ ಸೇವೆಗೈದು ಪ್ರಾಂಶುಪಾಲರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿಯಾದರು.

ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ‘ತೃಪ್ತಿ, ರೇವೆ, ಮಲಪ್ರಭೆ, ಮದನಿಕೆ, ರಾಗದರ್ಬಾರಿ, ಸಂತೆ, ಭಾಗೀರಥಿ ಚಾಳ, ಪುಲ್ವಾಮ’ ಅವರ ಕಥಾ ಸಂಕಲನಗಳು. ‘ಸಾಗರದ ಈಚೆ-ಆಚೆ’ ಅವರ ಮೊದಲ ಪ್ರವಾಸ ಕಥನ. ಅವರ ನಾಟಕ ‘ಓಕುಳಿ’ ರಾಜ್ಯ ಮಟ್ಟದ ಕೆ.ಎ.ಸುಬ್ಬಣ್ಣ ಪ್ರಶಸ್ತಿಗೆ ಭಾಜನವಾಗಿದೆ. ‘ಸಂತೆ’ ಕಥಾಸಂಕಲನಕ್ಕೆ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಹಾಗೂ ಭಾಗೀರಥಿ ಬಾಳ ಕಥಾ ಸಂಕಲನಕ್ಕೆ ವಿಶ್ವೇಶ್ವರಯ್ಯ ಸಾಹಿತ್ಯ ಬಹುಮಾನ ದೊರೆತಿದೆ. ಅನೇಕ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಅನೇಕ ಪತ್ರಿಕೆಗಳಲ್ಲಿ ಕಥೆ, ಪ್ರಬಂಧ, ಹಾಸ್ಯ ಲೇಖನ, ಅಂಕಣ ಬರೆಹಗಳು ಪ್ರಕಟಗೊಂಡಿವೆ. ಪ್ರಸ್ತುತ ಸಂಗೀತ ಬಳಗದ ಅಧ್ಯಕ್ಷರು.

ಸುಬ್ರಾವ ಕುಲಕರ್ಣಿ