ರಕ್ಷಕ (ಕಥಾ ಸಂಕಲನ)

Author : ಸುಬ್ರಾವ ಕುಲಕರ್ಣಿ

Pages 132

₹ 120.00




Year of Publication: 2021
Published by: ಬಸವ ಪ್ರಕಾಶನ
Address: ಕಲಬುರಗಿ

Synopsys

ಹಿರಿಯ ಲೇಖಕ ಸುಬ್ರಾವ್ ಕುಲಕರ್ಣಿ ಅವರ ಕಥಾ ಸಂಕಲನ-‘ರಕ್ಷಕ’. ರಕ್ಷಕ, ತಂತಿಬೇಲಿ,ಮೇಘ, ಶೋಧನಾ, ಮಿರುಗು, ಬೋರಂಗಿ ಸೇರಿದಂತೆ ಒಟ್ಟು 10 ಕಥೆಗಳಿದ್ದು. ಸಮಕಾಲೀನ ಸಂದರ್ಭದಲ್ಲಿ ವಿಶ್ವವೇ ಅನುಭವಿಸುತ್ತಿರುವ ಕರೋನಾ ಎಂಬ ರೋಗಾಣುವಿನ ಉಪಟಳವನ್ನು ಲೇಖಕರು ತಮ್ಮ ಕಥೆಗಳಲ್ಲಿ ಚಿತ್ರಿಸಿದ್ದಾರೆ. ಒಂದು ಕತೆಯಲ್ಲಿ ಕರೋನ ಹಠಾತ್ತಾಗಿ ಸಂಭವಿಸಿದರೆ ಇನ್ನೊಂದರಲ್ಲಿ ಕಥಾನಾಯಕನಾಗಿ ವಿಜೃಂಭಿಸಿದೆ. ಮನುಷ್ಯ ಸಂಬಂಧಗಳು ಅಪ್ಪಿದ ದುರಂತವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದು ಓದಿನ ಆಕರ್ಷಣೆ. ಕಥೆಗಳಲ್ಲಿ ವೈದ್ಯಕೀಯ ದುರಂತಗಳನ್ನು ಚಿತ್ರಿಸಲು ಪ್ರಯತ್ನಿಸಿದ್ದಾರೆ.

About the Author

ಸುಬ್ರಾವ ಕುಲಕರ್ಣಿ

ಸಾಹಿತಿ, ಕತೆಗಾರ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಿತರಾದ ಸುಬ್ರಾವ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋಣಿಯವರು. ಹೊಸ ಜನರ ಸಂಸ್ಕೃತಿ-ಪರಿಸರವನ್ನು ಅರಿಯುವ ತುಡಿತವಿದ್ದು ಪೂರಕವಾಗಿ ಸುಬ್ರಾವ ಅವರು ದೇಶ ವಿದೇಶಗಳನ್ನು ಭೇಟಿ ನೀಡುತ್ತಾರೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ (ಐ.ಟಿ.ಐ) ವಿವಿಧ ಹುದ್ದೆಗಳಲ್ಲಿ ಸೇವೆಗೈದು ಪ್ರಾಂಶುಪಾಲರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿಯಾದರು. ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ‘ತೃಪ್ತಿ, ರೇವೆ, ಮಲಪ್ರಭೆ, ಮದನಿಕೆ, ರಾಗದರ್ಬಾರಿ, ಸಂತೆ, ಭಾಗೀರಥಿ ಚಾಳ, ಪುಲ್ವಾಮ’ ಅವರ ಕಥಾ ಸಂಕಲನಗಳು. ‘ಸಾಗರದ ಈಚೆ-ಆಚೆ’ ಅವರ ...

READ MORE

Related Books