About the Author

ಕವಯತ್ರಿ ಸುಜಾತಾ ಅಕ್ಕಿ ಅವರು ಜಾನಪದೀಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸ್ಥೆ ಹೊಂದಿದವರು. ಅವರು 1967 ಆಗಸ್ಟ್‌ 15ರಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿಯಲ್ಲಿ ಜನಿಸಿದರು. ಜಾನಪದ ಅಧ್ಯಯನದೊಂದಿಗೆ ಕರ್ನಾಟಕ ಜನತೆಗೆ ತಲುಪುವಂತೆ ಮಡಿದವರು. ಜಾನಪದ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ’ಪುಟಕ್ಕಿಟ್ಟ ಕವನ - ಕವನ ಸಂಕಲನ, ಸುರಗಿಸುವ್ವಾಲೆ - ಜಾನಪದ ಸಂಪಾದನೆ, ಶ್ರೀ ಬಂಡೆ ರಂಗನಾಥೇಶ್ವರ ಜಾತ್ರೆ - ಜಾನಪದೀಯ ಅಧ್ಯಯನ, ಸಾರಥಿ - ಬಯಲಾಟದ ಸಾರಥಿ, ಆಕೆ ಏನು?, ಮಾದೇವಿ ಮತ್ತು ಇತರೆ ನಾಟಕಗಳು. ’ಬಳ್ಳಾರಿ ಜಿಲ್ಲೆಯ ರಂಗನಟಿಯರು’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ’ಸಮಗ್ರ ಸಾಹಿತ್ಯ ಮತ್ತು ಸೇವೆ ಜಾತ್ಯಾತೀತ ಸಾಹಿತ್ಯ ರತ್ನ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ, ಸುವರ್ಣ ಸಿರಿ ರತ್ನ ಸಾಹಿತ್ಯ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಅವರ ಮುಡಿಗೇರಿವೆ. 

ಸುಜಾತಾ ಅಕ್ಕಿ