About the Author

ಮಕ್ಕಳ ಸಾಹಿತಿ, ಅನುವಾದಕಿ ಸುಜಾತಾ ಎಸ್.ವಿ ಅವರು ಮೂಲತಃ ನಂಜನಗೂಡಿನವರು. ಪುಟ್ಟಿಗೊಂಬೆ ಕವನ ಸಂಕಲನ. ಮಕ್ಕಳ ನಮನ ಎಂಬ ಧ್ವನಿಸುರುಳಿ ಹೊರತಂದಿದ್ದಾರೆ. ಗಣನಿ ಆರ್ಯಿಕಾ ಜ್ಞಾನಮತಿ ಮಾತಾಜಿ (ಹಿಂದಿ), ಅನಂತನಾಥ ಪುರಾಣ (ಪ್ರಾಕೃತದಿಂದ), ಗಾಂಧೀಜಿಯವರ ಬರಹಗಳು (ಇಂಗ್ಲಿಷಿನಿಂದ), ಅಮೆರಿಕಾದಲ್ಲಿ ಜಿನಧರ್ಮ (ಇಂಗ್ಲಿಷಿನಿಂದ), ಪದಕೋಶ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ’ಗಣಕ ಪದ ವಿವರಣಾ ಕೋಶ, ಹನ್ನೆರಡು ಕಥಾ ರತ್ನಗಳು, ಧವಳ (ನಿಯತಕಾಲಿಕ) ಮಾಧವಿ, ಶ್ರೇಯೋಭದ ಸುಮಾ ವಸಂತ’ ಅವರ ಸಂಪಾದಿತ ಕೃತಿಗಳು.ಅವರ ಸಾಹಿತ್ಯ ಸೇವೆಗೆ ’ಶ್ರೀ ಗೋಮ್ಮಟೇಶ್ವರ ವಿದ್ಯಾಪೀಠ ರಾಷ್ಟ್ರೀಯ ಪ್ರಶಸ್ತಿ’ ದೊರೆತಿದೆ.

ಸುಜಾತಾ ಎಸ್. ವಿ.

(07 Jan 1955)