About the Author

ಸುಕನ್ಯಾ ಮಾರುತಿ ಅವರು 1956 ಮಾರ್ಚ್‌ 1ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಧಾರವಾಡದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಪ್ರಮುಖ ಕೃತಿಗಳೆಂದರೆ ಪರಿಸರದಲ್ಲಿ, ನಾನು ನನ್ನವರು, ಪಂಚಾಗ್ನಿ ಮಧ್ಯೆ, ತಾಜಮಹಲಿನ ಹಾಡು, ಬಿ೦ಬದೊಳಗಣ ಮಾತು, ಸಂಸ್ಕೃತಿ, ಪ್ರಣಯಿನಿ, ಪ್ರಶಾ೦ತ ಮುಂತಾದವು. ಸುಕನ್ಯಾ ಅವರಿಗೆ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ, ಅಂಬೇಡ್ಕರ ಪ್ರಶಸ್ತಿ, ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಬಹುಮಾನ ಮುಂತಾದ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಅವರು ಗೋಕಾಕ್ ಚಳುವಳಿ, ದಲಿತ ಬ೦ಡಾಯ ಚಳುವಳಿ ಮು೦ತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
 

ಸುಕನ್ಯಾ ಮಾರುತಿ

(01 Mar 1956)