About the Author

ಲೇಖಕಿ ಪ್ರೊ ಸುಮಾ ವಸಂತ ಸಾವಂತ ಮೂಲತ: ಹಾವೇರಿ ಜಿಲ್ಲೆಯವರು. ತಂದೆ ವಸಂತರಾವ್ ತಾಯಿ ಕೃಷ್ಣ ಬಾಯಿ.  ಪ್ರಾಥಮಿಕ,ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಹಾವೇರಿಯಲ್ಲಿ ಪೂರ್ಣಗಗೊಳಿಸಿ, ಹುಬ್ಬಳ್ಳಿಯಲ್ಲಿ ಬಿಎ ಹಾಗೂ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದಿಂದ ಎಂ ಎ ಪದವಿಯನ್ನು ರಾಂಕ್ ನೊಂದಿಗೆ ಪಡೆದರು.  ಹಂಪಿಯ  ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.  ಎ.ಜಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರು. 

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ .ಈವರೆಗೆ 18 ಲೇಖನಗಳು ಪ್ರತಿಷ್ಠಿತ ಪ್ರಕಾಶನದಡಿ ಪ್ರಕಟವಾಗಿವೆ. 

ಕೃತಿಗಳು: ಸಂತ ಶರಣ ಸಾಹಿತ್ಯ , ಸಂತ ಶರಣರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು, ವಿಚಾರ ವಿನ್ಯಾಸ, ಶೋಧ ಸಂಚಯ  ಇವರ ಪ್ರಮುಖ ಕೃತಿಗಳು. 

ಪ್ರಶಸ್ತಿ-ಪುರಸ್ಕಾರಗಳು:  ಪಿಯು ಮಂಡಳಿಯಿಂದ (2017-18)  ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ , 018-19 ನೇ ಸಾಲಿನಲ್ಲಿ ನವದೆಹಲಿಯ  ಇಂಟರ್ ನ್ಯಾಷನಲ್ ಬಿಸಿನೆಸ್ ಕೌನ್ಸಿಲ್- ನಿಂದ  ‘ಭಾರತ ವಿದ್ಯಾರತ್ನ’ ಪುರಸ್ಕಾರಲಭಿಸಿದೆ.

ಸುಮಾ ವಸಂತ ಸಾವಂತ

Books by Author