ಶೋಧ ಸಂಚಯ

Author : ಸುಮಾ ವಸಂತ ಸಾವಂತ

Pages 182

₹ 200.00




Year of Publication: 2021
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಲೇಖಕಿ ಪ್ರೊ. ಸುಮಾ ಸಾವಂತ ಅವರು ಸಂಪಾದಿಸಿದ  ಕೃತಿ-"ಶೋಧ ಸಂಚಯ". ಪ್ರಜಾಪ್ರಭುತ್ವದ ಮೂಲ ತತ್ವಗಳೆಲ್ಲವೂ ಸಾರ್ವತ್ರಿಕವಾಗಿ ಒಪ್ಪಿದ ಉತ್ತಮ ವ್ಯವಸ್ಥೆ. ಮಾನವ ಸಮಾಜವೆಂಬ ಜೀವಂತ ಪ್ರಯೋಗಶಾಲೆಯಲ್ಲಿ ಪರೀಕ್ಷೆಗೋಳಪಟ್ಟ ಚಿಂತನ ಮಂಥನದ ಮೂಲಕ ಪರಿಷ್ಕೃತಗೊಂಡು ನೈತಿಕ ಮೌಲ್ಯಗಳ ಮೂಲಕ ಅಭಿವ್ಯಕ್ತಿ ಪಡೆದ ಜ್ಞಾನದ ಸಿಂಚನದ ಶೋಧಗಳು ಈ ಹೊತ್ತಿಗೆಯಲ್ಲಿ ಅಡಗಿವೆ.  ಇಲ್ಲಿಯ 25 ಲೇಖನಗಳು ವಿವಿಧ ಸಂಬಂಧಗಳ ಒತ್ತಡದಿಂದ ರೂಪಗೊಂಡವು. ಯೌವನ ಎಲ್ಲ ಜೀವಿಗಳ ಬದುಕಿನ ಸುಂದರ ಕಾಲಘಟ್ಟ. ಅಪಾರ ಜೀವನೋತ್ಸಾಹ, ಹುಮ್ಮಸ್ಸು,  ಪ್ರಚಂಡ ಧೈರ್ಯ,  ಯೌವನವು ಬರುವಾಗ ಎಷ್ಟು ಹಿತಕರವೊ, ಸಂದ ಇವನ ದಿನಗಳನ್ನು ಮೆಲುಕು ಹಾಕಲು ಅಷ್ಟೇ ಹಿತಕರ.ಈ ಎಲ್ಲಾ ಕ್ರಾಂತಿಕಾರಿ ಚಿಂತನೆಗಳು ಹಾಗೂ ಕಾರ್ಯಗಳು ಮೊಳಕೆಯೊಡೆದು, ಕುಡಿ ಬಿಟ್ಟು ಹಬ್ಬುವ ಕಾಲವಿದು. ಇದಕ್ಕೆ ಸ್ತ್ರೀ-ಪುರುಷ ಚಿಂತನೆಗಳು ಅವಧಿಯ ನಿರ್ಣಯಗಳೇ ಆಗಿವೆ. ಅದರ ಪರಿಣಾಮ ಸಾಧ್ಯಾನು ಸಾಧ್ಯತೆ ಮುಂತಾದವುಗಳ ಭಾವನೆಗಳ ಕೃತಿ ಇದು. 

ವೈದೇಹಿ ಕಥೆಗಳಲ್ಲಿ ಕರಾವಳಿ ಕುಂದಾಪುರ ಜಗತ್ತು, ಡಾ. ಅನುಪಮಾ ನಿರಂಜನರವರ ಮಾಧವಿ, ರಕ್ಕಸತಂಗಡಿ ಹತ್ತಿಕಲಾರದ ತಲೆದಂಡ, ಕುವೆಂಪು ಅವರ ಕಥೆಗಳಲ್ಲಿ ಕೌಟುಂಬಿಕ ನೆಲೆಗಳು, ಶರಣ ಸಾಹಿತ್ಯದಲ್ಲಿ ಸಾಮಾಜಿಕ ಚಳವಳಿ, ನಾಟಕ ಸಾಹಿತ್ಯ,ಸಾಹಿತ್ಯ ಮತ್ತು ಸೃಜನಶೀಲತೆ,ಕನ್ನಡ ಸಿನಿಮಾ ಲೋಕದ ಸುತ್ತ ಒಂದು ಅವಲೋಕನ, ಮೈಲಾರ ಸಂಸ್ಕೃತಿ, ಹೊರಗ ಅದಿಮ ಬುಡಕಟ್ಟು, ಕನ್ನಡ ಪ್ರಾಚೀನ ಸಾಹಿತ್ಯಕ್ಕೆ ಶಾಸನಗಳ ಕೈಗನ್ನಡಿ,ಮಹಿಳಾ ಆತ್ಮಕಥನ ಗಳಲ್ಲಿ ಸ್ತ್ರೀ ಸಂಘರ್ಷ, ಹೀಗೆ ಹತ್ತು ಹಲವಾರು ಲೇಖನಗಳು ಮನಸ್ಸನ್ನು ಆಕರ್ಷಿಸುತ್ತವೆ.

 

About the Author

ಸುಮಾ ವಸಂತ ಸಾವಂತ

ಲೇಖಕಿ ಪ್ರೊ ಸುಮಾ ವಸಂತ ಸಾವಂತ ಮೂಲತ: ಹಾವೇರಿ ಜಿಲ್ಲೆಯವರು. ತಂದೆ ವಸಂತರಾವ್ ತಾಯಿ ಕೃಷ್ಣ ಬಾಯಿ.  ಪ್ರಾಥಮಿಕ,ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಹಾವೇರಿಯಲ್ಲಿ ಪೂರ್ಣಗಗೊಳಿಸಿ, ಹುಬ್ಬಳ್ಳಿಯಲ್ಲಿ ಬಿಎ ಹಾಗೂ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದಿಂದ ಎಂ ಎ ಪದವಿಯನ್ನು ರಾಂಕ್ ನೊಂದಿಗೆ ಪಡೆದರು.  ಹಂಪಿಯ  ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.  ಎ.ಜಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರು.  ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ .ಈವರೆಗೆ 18 ಲೇಖನಗಳು ಪ್ರತಿಷ್ಠಿತ ಪ್ರಕಾಶನದಡಿ ಪ್ರಕಟವಾಗಿವೆ.  ಕೃತಿಗಳು: ಸಂತ ಶರಣ ಸಾಹಿತ್ಯ , ಸಂತ ಶರಣರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು, ವಿಚಾರ ವಿನ್ಯಾಸ, ಶೋಧ ಸಂಚಯ  ...

READ MORE

Related Books