About the Author

ಸುನಿತಾ ಕೂಡ್ಲಿಕರ ಅವರು ಬೀದರ್ ಜಿಲ್ಲೆಯವರಾಗಿದ್ದು, ಕನ್ನಡದಲ್ಲಿ ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ತಾಯ್ತನದ ವಿಭಿನ್ನ ಗ್ರಹಿಕೆಗಳು' ಇವರ ಮೊದಲ ಕೃತಿಯಾಗಿದ್ದು, ಪಿಎಚ್.ಡಿ. ಅಧ್ಯಯನದ ಮಹಾಪ್ರಬಂಧವಾಗಿದೆ. ಸಾಹಿತ್ಯದ ಓದು, ಅಧ್ಯಾಪನ, ಬರವಣಿಗೆ ಇವರ ಆಸಕ್ತಿ ಕ್ಷೇತ್ರವಾಗಿದೆ. ಪ್ರಸ್ತುತ ಇವರು ಬೀದರನ ಕರ್ನಾಟಕ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ- ಸಂಸ್ಕ್ರತಿ ಕುರಿತು ಇವರು ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸುನಿತಾ ಕೂಡ್ಲಿಕರ