ತಾಯ್ತನದ ವಿಭಿನ್ನ ಗ್ರಹಿಕೆಗಳು

Author : ಸುನಿತಾ ಕೂಡ್ಲಿಕರ

Pages 244

₹ 300.00




Year of Publication: 2022
Published by: ಶ್ರೀ ಗೌರಿ ಪ್ರಕಾಶನ, ಬೀದರ

Synopsys

ಸುನಿತಾ ಕೂಡ್ಲಿಕರ ಅವರ ಕೃತಿ ತಾಯ್ತನದ ವಿಭಿನ್ನ ಗ್ರಹಿಕೆಗಳು. ಈ ಕೃತಿಯಲ್ಲಿ ಡಾ.ಕವಿತಾ ರೈ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ತಾಯ್ತನದ ವಿಭಿನ್ನ ಗ್ರಹಿಕೆಗಳು ವಿಷಯಾಧಾರಿತವಾದ ಈ ಸಂಶೋಧನೆಯು ಜಾನಪದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅನನ್ಯತೆಯ ಗತಿಯನ್ನು ಗುರುತಿಸುವ ಪ್ರಯತ್ನವಾಗಿದೆ. ಚೆಂಡರ್‍ ನೆಲೆಯ ಈ ಅಧ್ಯಯನವು ಸ್ತ್ರೀವಾದಿ ಜಾನಪದದ ಆಸಕ್ತಿಯಿಂದ ನಿರೂಪಿತಗೊಂಡಿದೆ ಎಂಬುದಾಗಿ ಹೇಳಿದ್ದಾರೆ. 

About the Author

ಸುನಿತಾ ಕೂಡ್ಲಿಕರ

ಸುನಿತಾ ಕೂಡ್ಲಿಕರ ಅವರು ಬೀದರ್ ಜಿಲ್ಲೆಯವರಾಗಿದ್ದು, ಕನ್ನಡದಲ್ಲಿ ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ತಾಯ್ತನದ ವಿಭಿನ್ನ ಗ್ರಹಿಕೆಗಳು' ಇವರ ಮೊದಲ ಕೃತಿಯಾಗಿದ್ದು, ಪಿಎಚ್.ಡಿ. ಅಧ್ಯಯನದ ಮಹಾಪ್ರಬಂಧವಾಗಿದೆ. ಸಾಹಿತ್ಯದ ಓದು, ಅಧ್ಯಾಪನ, ಬರವಣಿಗೆ ಇವರ ಆಸಕ್ತಿ ಕ್ಷೇತ್ರವಾಗಿದೆ. ಪ್ರಸ್ತುತ ಇವರು ಬೀದರನ ಕರ್ನಾಟಕ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ- ಸಂಸ್ಕ್ರತಿ ಕುರಿತು ಇವರು ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ...

READ MORE

Related Books