About the Author

ಸುರೇಶ ಕಂಬಳಿ ಅವರು ಕೊಪ್ಪಳ ತಾಲೂಕಿನ ಗಬ್ಬೂರು  ಗ್ರಾಮದವರು. ಸ್ನಾತಕೋತ್ತರ ಪದವೀಧರರು. ತಂದೆ ರಾಮಣ್ಣ ಕಂಬಳಿ, ತಾಯಿ ಶಾವಂತ್ರಮ್ಮ. ಕಳೆದ 13 ವರ್ಷಗಳಿಂದ ನಂದಿಹಳ್ಳಿ ಜೆ ‍ಹಾಗೂ ಕನ್ನೇರಮಡು ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಹಾಸಗಲ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿ ನೇತ್ರದಾನ, ರಕ್ತದಾನ ಇನ್ನಿತರ ಧ್ವನಿಸುರುಳಿಗೆ, ಹಾಗೂ ಚಲನಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಜಾನಕಿ,ಕಾವೇರಿ, ಜನಕ ಶೈಕ್ಷಣಿಕ  ಕಿರುಚಿತ್ರಗಳು ಇವರ ಕತೆ ನಿರ್ಮಾಣದಲ್ಲಿ ಮೂಡಿಬಂದಿದ್ದು ಹೆಗ್ಗಳಿಕೆ . ಅವರ ಕವಿತೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. 

ಪ್ರಶಸ್ತಿಗಳು: ಸಂಕ್ರಮಣ ಕಾವ್ಯಪುರಸ್ಕಾರ, ಮಾತೋಶ್ರೀ ಮಾಣಿಕ್ಯ, ಕಲ್ಯಾಣ ಕಣ್ಮಣಿ, ಕನ್ನಡ ಶಿಖಾಮಣಿ, ಕೊಪ್ಪಳ ಜಿಲ್ಲಾ 9 ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಸಂದಿದೆ. 

ಕೃತಿಗಳು: ತುತ್ತು ಕೊಟ್ಟ ಅತ್ತಿಗೆ, ಹಾಲುಣಿಸಿದ ಅಣ್ಣ, ಮತ್ತೆ ಹುಟ್ಟಿದ ಮುತ್ತೈದೆ, ತೊಟ್ಟಿಲ ತೂಗಿದ ಗರತಿ, ಮಳೆ ಹನಿ, ಗುಬ್ಬಿಗೂಡು, ಶಿಶುಪ್ರಾಸಗಳ ಸಂಪಾದನೆ, ಪುಟಾಣಿ ಗೊಂಬೆ

 

 

ಸುರೇಶ ಕಂಬಳಿ

(03 Jun 1985)