ಮಳೆ ಹನಿ

Author : ಸುರೇಶ ಕಂಬಳಿ

Pages 66

₹ 50.00




Year of Publication: 2012
Published by: ರೇಣುಕಾ ಪ್ರಕಾಶನ
Address: ನೆಲ ಮಹಡಿ, ಬೇಲೂರು ರಸ್ತೆ, ಮಾಚೇನಹಳ್ಳಿ ಗ್ರಾಮ ಪಂಚಾಯತಿ\nಗುಡ್ಡೇನಹಳ್ಳಿ ಕೊಪ್ಪಲು, ಹಾಸನ 573 201
Phone: 9483987782

Synopsys

ಸುರೇಶ್‌ ಕಂಬಳಿಯವರ 'ಮಳೆಹನಿ ಹನಿಗವನ ಸಂಕಲನದಲ್ಲಿ ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ಕಾಳಜಿ, ದಾಂಪತ್ಯ, ಧರ್ಮ ಮುಂತಾದ ಅಂಶಗಳು ಎದ್ದು ಕಾಣುತ್ತವೆ. ಕೆಲವು ಕಡೆ ಅಂತ್ಯ ಪ್ರಾಸಕ್ಕಾಗಿ ಹಾತೊರೆಯದೇ ಬಂದ ಹಾಗೆ ಸ್ವೀಕರಿಸಿದ್ದಾರೆ. ಚುಟುಕುಗಳು ವಿಭಿನ್ನವಾಗಿದ್ದು ಸ್ವಂತಿಕೆಯಿಂದ ಮೆಚ್ಚುಗೆ ಗಳಿಸುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಹನಿಗವನಗಳು ಭಾಷಣಕಾರರಿಗೆ ಕೈಪಿಡಿಯಂತಿವೆ. ಕಂಬಳಿಯವರ ಕಾವ್ಯದಲ್ಲಿ ಅಂತಃಕರಣವಿದೆ. ವಿಡಂಬನೆ, ಮೂಢನಂಬಿಕೆ, ರಾಜಕಾರಣದ ಜಾತಿಯ ಬಗ್ಗೆ ತಾತ್ಸರ, ಬಗ್ಗೆ ಆಕ್ರೋಶವಿದೆ. ಬಡವರ ಬಗ್ಗೆ ಅನುಕಂಪವಿದೆ. ರೂಢಿ, ನಗು, ವ್ಯಾಕುಲ, ಮಳೆಹನಿ, ಬರಗಾಲ, ಪ್ರಶ್ನೆ, ಬಜೆಟ್, ಕರುಣೆ, ಪ್ರಶಸ್ತಿ, ಹಸಿವು ಮಾರಾಟ, ದುಸ್ಥಿತಿ ಮುಂತಾದ ಹನಿಗವನಗಳು ಓದುಗರ ಗಮನ ಸೆಳೆಯುತ್ತವೆ. ಕಂಬಳಿ ಅವರಿಗೆ ಭವಿಷ್ಯವಿದೆ. ಅಧ್ಯಯನ ಅನುಭವಗಳಿಂದ ಅವರ ಕಾವ್ಯಕ್ಕೆ ಪಕ್ವತೆ ಬಂದೇ ಬರುತ್ತದೆ. ಅದರ ಆರಂಭವಾಗಿದೆ ಎನ್ನುವುದಕ್ಕೆ ಈ 'ಮಳೆಹನಿ'ಯೇ ಸಾಕ್ಷಿ ಎಂದು ಗಂಗಾವತಿ ಪ್ರಾಣೇಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುರೇಶ ಕಂಬಳಿ
(03 June 1985)

ಸುರೇಶ ಕಂಬಳಿ ಅವರು ಕೊಪ್ಪಳ ತಾಲೂಕಿನ ಗಬ್ಬೂರು  ಗ್ರಾಮದವರು. ಸ್ನಾತಕೋತ್ತರ ಪದವೀಧರರು. ತಂದೆ ರಾಮಣ್ಣ ಕಂಬಳಿ, ತಾಯಿ ಶಾವಂತ್ರಮ್ಮ. ಕಳೆದ 13 ವರ್ಷಗಳಿಂದ ನಂದಿಹಳ್ಳಿ ಜೆ ‍ಹಾಗೂ ಕನ್ನೇರಮಡು ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಹಾಸಗಲ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿ ನೇತ್ರದಾನ, ರಕ್ತದಾನ ಇನ್ನಿತರ ಧ್ವನಿಸುರುಳಿಗೆ, ಹಾಗೂ ಚಲನಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಜಾನಕಿ,ಕಾವೇರಿ, ಜನಕ ಶೈಕ್ಷಣಿಕ  ಕಿರುಚಿತ್ರಗಳು ಇವರ ಕತೆ ನಿರ್ಮಾಣದಲ್ಲಿ ಮೂಡಿಬಂದಿದ್ದು ಹೆಗ್ಗಳಿಕೆ . ಅವರ ಕವಿತೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ.  ಪ್ರಶಸ್ತಿಗಳು: ಸಂಕ್ರಮಣ ಕಾವ್ಯಪುರಸ್ಕಾರ, ಮಾತೋಶ್ರೀ ಮಾಣಿಕ್ಯ, ಕಲ್ಯಾಣ ಕಣ್ಮಣಿ, ಕನ್ನಡ ಶಿಖಾಮಣಿ, ...

READ MORE

Related Books