About the Author

ಕಲಾವಿದ, ಲೇಖಕ ಸುರೇಶ ವೆಂಕಟೇಶ ಕುಲಕರ್ಣಿ ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ 1948 ಏಪ್ರಿಲ್ 25ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ  ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಇವರಿಗೆ 1969ರಿಂದ ಬೇಂದ್ರೆ ಅವರ ನಿಕಟ ಸಂಪರ್ಕ ಬೆಳೆಯಿತು. ಕರ್ನಾಟಕ ಹೈಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭ.

‘ಮೇಘದೂತ ಡಾ. ದ. ರಾ. ಬೇಂದ್ರೆ, ನನ್ನ ನಲ್ಲ - ಹಲಸಂಗಿ ಚನ್ನಬಸಪ್ಪ ಮತ್ತು ಜೀವಿ, ಔದುಂಬರ ಗಾಥೆ - ದ. ರಾ. ಬೇಂದ್ರೆ ಅವರ ಸಮಗ್ರ ಕಾವ್ಯ ಸಂಪುಟ, ಸಚಿತ್ರ ಇತಿಹಾಸ ಪುಸ್ತಕ, ಸಸ್ಯ ಸಂಪದ, ಪ್ರಾಣಿ ಸಂಪದ’ ಅವರ ಪ್ರಕಟಿತ ಕೃತಿಗಳು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಭಾವೈಕ್ಯ, ಅನುಭವ, ರಚನಾ ಮುಂತಾದ ಶಿಬಿರಗಳ ಆಯೋಜನೆ. `ವನ್ಯ ಪ್ರಾಣಿಗಳು’ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಬಹುಮಾನ ಗಳಿಸಿದ್ದು ಶಿಕ್ಷಕರ ಡ್ರಾಯಿಂಗ್‌ ಕೋರ್ಸಿನಲ್ಲೂ ರಾಜ್ಯಕ್ಕೆ ಪ್ರಥಮsಸ್ಥಾನ ಪಡೆದಿದ್ದಾರೆ.ಅವರಿಗೆ ಕರ್ನಾಟಕ ರಾಜ್ಯ ಕಲ್ಯಾಣ ನಿಧಿ 'ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶ್ರೀ ಸತೃಸಾಯಿ ಸಂಸ್ಥೆಯಿಂದ 'ಆದರ್ಶ ಗುರು' ರಾಜ್ಯ ಪ್ರಶಸ್ತಿ -ಗೌರವಗಳು ಅವರಿಗೆ ಸಂದಿವೆ.

ಸುರೇಶ ವೆಂ. ಕುಲಕರ್ಣಿ

(25 Apr 1948)