ಚಲುವ ಕನ್ನಡನಾಡು

Author : ಸುರೇಶ ವೆಂ. ಕುಲಕರ್ಣಿ

Pages 188

₹ 100.00




Year of Publication: 2008
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: ಅಲ್ಲಮಪ್ರಭು ಜನಕಲ್ಯಾಣ

Synopsys

‘ಚಲುವ ಕನ್ನಡನಾಡು’ ಕೃತಿಯು ಸುರೇಶ ವೆ. ಕುಲಕರ್ಣಿ ಅವರ ವಿವಿಧ ಜಿಲ್ಲೆಗಳ ಕುರಿತ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ ; ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, 60 ವರ್ಷಕಳೆದೆ. ಇಲ್ಲಿಯ ಜನರಿಂದ ನಡೆ-ನುಡಿ, ಸಂಸ್ಕಾರವನ್ನು ಪಡೆದೆ, ಕನ್ನಡನಾಡಿನ ಜನರ ತ್ಯಾಗ, ಪ್ರೀತಿ, ಸಹಕಾರ ಪಡೆದೆ. ಕರ್ನಾಟಕದ ಅನೇಕ ಕಡೆಗಳಲ್ಲಿ ಸುತ್ತಿದಾಗ ಭಾಷೆಯ ವೈವಿಧ್ಯತೆ, ಧಾರ್ಮಿಕ ಸಂಪ್ರದಾಯಗಳಲ್ಲಿರುವ ವೈವಿಧ್ಯತೆಗಳನ್ನು ತಿಳಿದೆ. 'ವಿವಿಧತೆಯಲ್ಲಿಯೂ ಏಕತೆಯನ್ನು ಕಂಡ ನಾಡಿದು' ಎಂದರಿತೆ. ಭೂವೈಶಿಷ್ಟ್ಯತೆಗಳನ್ನು ಅನುಭವಿಸಿದೆ. ಐತಿಹಾಸಿಕ ವೈಭವಗಳ ಕುರುಹುಗಳ ಭವ್ಯತೆಯನ್ನು ಕಂಡೆ. ಅನೇಕ ವಿಷಯಗಳನ್ನು ಓದಿಯೂ ತಕ್ಕ ಮಟ್ಟಿಗೆ ತಿಳಿದಿದ್ದೆ. ಪೂಜ್ಯರಾದ ಶ್ರೀ ಮ.ನಿ.ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು ಕರ್ನಾಟಕರಾಜ್ಯದ ಬಗ್ಗೆ ಬರೆಯಲು ಪ್ರೋತ್ಸಾಹಿಸಿದಾಗ ಇನ್ನೂ ಆಳವಾಗಿ, ಸಮಗ್ರವಾಗಿ ತಿಳಿಯಲು ಪ್ರಯತ್ನಿಸಿದೆ. ಈ ನಾಡಿನಲ್ಲಿ ಸತ್ಪುರುಷರು, ಸಾಧುಗಳು, ಸಂತರು, ಋಷಿಗಳು, ಶರಣರು, ದಾಸರು, ಯುಗಪುರುಷರು, ಕವಿಗಳು, ಕಲಾತಪಸ್ವಿಗಳು, ಗಾಯಕರು, ವೀರರು, ವಿಜ್ಞಾನಿಗಳು, ಯಂತಜ್ಞರು, ತಂತ್ರಜ್ಞರು, ಕ್ರೀಡಾಪಟುಗಳು, ವಿವಿಧ ವಿಷಯಗಳ ಪಂಡಿತರು. ಹೀಗೆ ಅನೇಕರು ಉದಿಸಿ ವಿಶ್ವಮಟ್ಟದಲ್ಲಿ ಬೆಳೆದಿದ್ದಾರೆ. ಅಂಥವರ ನಾಡು ಈ ನನ್ನ ಕನ್ನಡನಾಡು, ಚೆಲುವ ಕನ್ನಡ ನಾಡು' ಎಂದು ಹೆಮ್ಮೆ ಪಟ್ಟೆ, ವಿವಿಧ ರಾಜ ಮನೆತನಗಳ ವೈಭವ, ಪತನಗಳನ್ನು ಓದಿ ತಿಳಿದೆ. ಜನಕಲ್ಯಾಣಕ್ಕಾಗಿ ಕಾರ್ಯ ಮಾಡಿದ ಅರಸರನ್ನು ನೆನದ ಮತ್ತು ಅವರ ದರ್ಪ, ಅಹಂಕಾರ, ಸ್ವಾರ್ಥ, ಅನ್ಯಾಯಗಳನ್ನು ಜನ ಸಾಮೂಹಿಕವಾಗಿ, ಮತಭೇದಗಳನ್ನೆಣಿಸದೇ ತಮ್ಮ ಜೀವ ತ್ಯಾಗಮಾಡಿದ, ಬಲಿದಾನ ಗೈದ ಪುಣ್ಯಪುರುಷರ ಜೀವನ ಅರಿತ. ಈ ಗ್ರಂಥದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಒಂದೊಂದು ಸಂಕೇತದ ಚಿತ್ರಗಳನ್ನು ರಚಿಸಲಾಗಿದೆ. ರಾಜ್ಯದ ಮತ್ತು ಪ್ರತಿಯೊಂದು ಜಿಲ್ಲೆಯ ನಕ್ಷೆಯನ್ನು ಕೊಡಲಾಗಿದೆ. ಪ್ರತಿಯೊಂದು ಜಿಲ್ಲೆಯ ಕೆಲವು ಛಾಯಾ ಚಿತ್ರ ಮತ್ತು ರೇಖಾಚಿತ್ರಗಳನ್ನು ಈ ಗ್ರಂಥದಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದು ಜಿಲ್ಲೆಗೂ ಅಂಕಿತನಾಮಕೊಡಲಾಗಿದೆ. ಈ ಗ್ರಂಥದಲ್ಲಿ ಎರಡು ಭಾಗಗಳನ್ನು ಮಾಡಲಾಗಿದ್ದು, ಮೊದಲನೆಯ ಭಾಗದಲ್ಲಿ ಜಿಲ್ಲೆಗಳ ಪರಿಚಯ ಮತ್ತು ಎರಡನೆಯ ಭಾಗದಲ್ಲಿ ಕರ್ನಾಟಕದ ವೈವಿಧ್ಯತೆಯ ಬಗ್ಗೆ ಸಂಕ್ಷಿಪ್ತವಾಗಿ ಕೊಡಲಾಗಿದೆ. ಕರ್ನಾಟಕ ರಾಜ್ಯದ ಚಿನ್ದ, ರಾಜ್ಯ ಪಕ್ಷಿ, ಪ್ರಾಣಿ, ಮರ, ಹೂವಿನ ಬಗ್ಗೆ ಸಚಿತ್ರವಾಗಿ ಕೊಡಲಾಗಿದ್ದು ಕೊನೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೊಡಲಾಗಿದೆ. ನಾನು ಬರೆದದ್ದು 'ಕರಿಯನ್ನು ಕನ್ನಡಿಯೊಳಗೆ ತೋರಿಸಿದಂತೆ, ಸಮುದ್ರವನ್ನು ಗಿಂಡಿಯಲ್ಲಿ ಹಿಡಿದಂತೆ' ಎಂಬುದನ್ನು ಬಲ್ಲೆ ಎಂಬುದಿದೆ.

About the Author

ಸುರೇಶ ವೆಂ. ಕುಲಕರ್ಣಿ
(25 April 1948)

ಕಲಾವಿದ, ಲೇಖಕ ಸುರೇಶ ವೆಂಕಟೇಶ ಕುಲಕರ್ಣಿ ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ 1948 ಏಪ್ರಿಲ್ 25ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ  ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಇವರಿಗೆ 1969ರಿಂದ ಬೇಂದ್ರೆ ಅವರ ನಿಕಟ ಸಂಪರ್ಕ ಬೆಳೆಯಿತು. ಕರ್ನಾಟಕ ಹೈಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭ. ‘ಮೇಘದೂತ ಡಾ. ದ. ರಾ. ಬೇಂದ್ರೆ, ನನ್ನ ನಲ್ಲ - ಹಲಸಂಗಿ ಚನ್ನಬಸಪ್ಪ ಮತ್ತು ಜೀವಿ, ಔದುಂಬರ ಗಾಥೆ - ದ. ರಾ. ಬೇಂದ್ರೆ ಅವರ ಸಮಗ್ರ ಕಾವ್ಯ ಸಂಪುಟ, ಸಚಿತ್ರ ಇತಿಹಾಸ ಪುಸ್ತಕ, ಸಸ್ಯ ಸಂಪದ, ಪ್ರಾಣಿ ...

READ MORE

Related Books