About the Author

ಲೇಖಕ ಸ್ವಾಲಿಹ್ ತೋಡಾರ್ ಮೂಲತಃ ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪದ ತೋಡಾರ್ ನವರು. ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಬಿಬಿಎಂ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿರುವ ಅವರು ಕಳೆದ ಆರು ವರ್ಷಗಳಿಂದ ಗಲ್ಫ್ ಇಶಾರ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು: ಅಜ್ಞಾತ ಭಾರತ, ಅಮ್ಮ ಬರೆದ ಎರಡು ಪತ್ರಗಳು, ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರು, ಮಾರ್ಟಿನ್ ಲಿಂಗ್ಸ್ ಮುಹಮ್ಮದ್

ಸ್ವಾಲಿಹ್ ತೋಡಾರ್