About the Author

ದೊಡ್ಡಬಳ್ಳಾಪುರದ ತಾಲೂಕು ತಿಪ್ಪೂರಿನ ಡಾ. ಟಿ.ಎಚ್.ಲವಕುಮಾರ್ ನಾಟಕಕಾರ, ನಿರ್ದೇಶಕ ಹಾಗೂ ಕನ್ನಡ -ಇಂಗ್ಲಿಷ್ ಎರಡೂ ರಂಗಭೂಮಿಯಲಿ ಕೆಲಸ ಮಾಡುತ್ತಿದ್ದಾರೆ. ನೀನಾಸಂ ಪದವಿಯೊಂದಿಗೆ ಪ್ರದರ್ಶನ ಕಲೆ, ಕನ್ನಡ, ಇಂಗ್ಲಿಷ್ ಹಾಗೂ ಮನಶಾಸ್ತ್ರದಲ್ಲಿ ಪದವೀಧರರು. ಪ್ರಸ್ತುತ ಬೆಂಗಳೂರಿನ ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರು. 

ಹೆಣದ ಮನೆ, ಕಣಿವೆಯ ನೆರಳಲ್ಲಿ, ಯಶೋಧರೆ ಮಲಗಿರಲಿಲ್ಲ, ಜತೆಗಿರುವನು ಚಂದಿರ, ಉರಿಯ ಉಯ್ಯಾಲೆ, ತುಕ್ರನ ಕನಸು, ಕತ್ತಲೆ ದಾರಿ ದೂರ ಸೇರಿದಂತೆ 22 ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದಾರೆ. 16ಕ್ಕೂ ಹೆಚ್ಚು ರಂಗಭೂಮಿ ಕುರಿತ ಲೇಖನಗಳು ಹೊಸತು, ಅಗ್ನಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 35ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಕಿರಣಗಳಲ್ಲಿ ವಿಚಾರ ಮಂಡಿಸಿದ್ದಾರೆ. 2011 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಮಕ್ಕಳ ರಂಗಭೂಮಿ ಕುರಿತ ಪುಸ್ತಕ ಬರೆಯಲು ವಾರ್ಷಿಕ ಫೆಲೋಶಿಪ್ ನೀಡಿ ಗೌರವಿಸಿದೆ. 2006- 2009 - ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಗ್ರಾಮಾಂತರ ಸಂಚಾಲಕರಾಗಿ, 2008 ರಲ್ಲಿ ಜನಪದ ಜಾತ್ರೆ ಬೆಂಗಳೂರು ಗ್ರಾಮಾಂತರ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

ಮಳೆ ಹನಿಯ ಜಾಡು ಹಿಡಿದು ಮತ್ತು ಬೆದರು ಬೊಂಬೆ - ಮಕ್ಕಳ ನಾಟಕಗಳು, ಹೆಣದ ಮನೆ ಮತ್ತು ಬೇಬಿ ಕಥೆ-ಅನುವಾದಗಳು, ಕನಕದಾಸರ ಕುರಿತ ‘ಕಿಂಡಿ’ ನಾಟಕ . ಕನಕ ಅಧ್ಯಯನ ಪೀಠದಿಂದ ಪ್ರಕಟಣೆಗೆ ಆಯ್ಕೆ ಜೊತೆಗೆ 47ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶ್ರಮಣ ರಂಗ ಮತ್ತು ಶ್ರಮಣ ಸಂಸ್ಕೃತಿ ಟ್ರಸ್ಟ್(ರಿ) ಮೂಲಕ ರಂಗಭೂಮಿ ,ಕಲೆ ಮತ್ತು ಸಾಹಿತ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದು . ಇವರು ಹುಟ್ಟು ಹಾಕಿದ ಹಶ್ಮಿ ಥಿಯೇಟರ್ ಫೋರಂ-ಕರ್ನಾಟಕ ನಾಡಿನ ಕಾಲೇಜು ರಂಗಭೂಮಿ, ಸಾಮುದಾಯಿಕ ರಂಗಭೂಮಿ ಮತ್ತು ಬೀದಿನಾಟಕ ಮೂಲಕ ಹೊಸ ರಂಗಪ್ರಯೋಗಗಳನ್ನು ನಡೆಸುತ್ತಿದೆ. ಲವಕುಮಾರ್ ಅವರ ನಾಟಕ ‘ಕಿಚ್ಚಿಲ್ಲದ ಬೇಗೆ’ ಪ್ರಕಟವಾಗಿದೆ.

ಟಿ.ಎಚ್.ಲವಕುಮಾರ್

BY THE AUTHOR