About the Author

ಹಾಸ್ಯ ಬರಹಗಾರ್ತಿ, ನಾಟಕಗಾರ್ತಿ ಸುನಂದಮ್ಮ ಟಿ, 1917 ಆಗಸ್ಟ್ 8 ರಂದು ಜನಿಸಿದರು. ತಂದೆ ರಾಮಯ್ಯ, ತಾಯಿ ನಾಗಮ್ಮ. ಇಂಟರ್ ಮಿಡಿಯಟ್ ವರೆಗೂ ಓದಿ ನಂತರ ಹಿಂದಿ ಅಭ್ಯಾಸ ಮಾಡಿದರು. ಹಾಸ್ಯ ನಿಯತಕಾಲಿಕೆ ಕೊರವಂಜಿಯಲ್ಲಿ ‘ನಾನ್ಕಾರಿಟ್ಟಿದ್ದು’ ಎಂಬ ನಗೆ ಲೇಖನದ ಮೂಲಕ ಹಾಸ್ಯ ಸಾಹಿತ್ಯ ಪ್ರಪಂಚವನ್ನು ಪ್ರವೇಶ ಮಾಡಿದ್ದು, ತಮ್ಮ ಕಲ್ಪನೆಯ ದಂಪತಿ ಮೈಲಾರಯ್ಯ-ಸರಸು ಮೂಲಕ ಕನ್ನಡದ ಓದುಗರನ್ನು ನಕ್ಕು ನಗಿಸಿ ವಿಡಂಬನೆಯ ಮೂಲಕ ತಿದ್ದಿದರು. ನಗೆ ಸಾಹಿತ್ಯವನ್ನು ಹೊರತುಪಡಿಸಿ ಅನೇಕ ರೇಡಿಯೋ ರೂಪಕಗಳನ್ನು ಬರೆದಿದ್ದಾರೆ.

ಗೃಹಲಕ್ಷ್ಮಿ (1964), ಜಂಬದ ಚೀಲ (1971), ನನ್ನ ಅತ್ತೆಗಿರಿ (1980), ಮೂರು ಗೀತ ರೂಪಕಗಳು (1993),  ಪೆಪರ್‌ಮೆಂಟ್, ಬಣ್ಣದ ಚಿಟ್ಟೆ, ತೆನಾಲಿ ರಾಮಕೃಷ್ಣ, ರೂಢಿಗಾಣ, ಸಮಗ್ರ ಸಾಹಿತ್ಯ, ಸಮಯ ಸಿಂಧು, ವೃಕ್ಷ ವಾಹನ, ಮುತ್ತಿನ ಚೆಂಡು, ಬೆಸ್ಟ್ ಆಫ್ ಸುನಂದಮ್ಮ’ ಅವರ ಹಾಸ್ಯ ಲೇಖನಗಳ ಸಂಗ್ರಹ ಮೊದಲಾದ ಕೃತಿಗಳಿವೆ. ಅವರ ಸಮಗ್ರ ಹಾಸ್ಯ ಸಾಹಿತ್ಯವೂ 1993ರಲ್ಲಿ ಪ್ರಕಟಗೊಂಡಿವೆ. ಕರ್ನಾಟಕ ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷೆಯಾಗಿದ್ದರು. ಚುಕ್ಕೆ ಚುಕ್ಕೆ, ಬಾದರಾಯಣ ಅವರ ಪ್ರಮುಖ ನಾಟಕ ಕೃತಿಗಳು. ’ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ 'ಅನುಪಮಾ' ಪ್ರಶಸ್ತಿ, ವಿಶ್ವೇಶ್ವರಯ್ಯ 'ನವರತ್ನ ಪ್ರಶಸ್ತಿ'ಗಳು ಸಂದಿವೆ. 2006 ಜನವರಿ 27ರಂದು ಅವರು ನಿಧನರಾದರು.

 

ಟಿ. ಸುನಂದಮ್ಮ

(08 Aug 1917)