About the Author

ತಿರುಮಲೆ ರಾಜಮ್ಮ 1900 ನವೆಂಬರ್‌ 20 ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲವೆಂಬುದನ್ನು ನೆನೆದಾಗ ಇನ್ನಷ್ಟು ಅಚ್ಚರಿ ಎನಿಸುತ್ತದೆ.

ರಾಜಮ್ಮನವರ ಮಾತೃ ಭಾಷೆ ತೆಲುಗು. ತೆಲುಗು ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಅದರಲ್ಲೂ ದೇಶಭಕ್ತ ಸಾಹಿತಿ ಎನಿಸಿಕೊಂಡಿದ್ದ ‘ವೀರೇಶಲಿಂಗಂ’ ಅವರ ಸಾಹಿತ್ಯವನ್ನು ಓದಿ ಮೆಚ್ಚಿಕೊಂಡಿದ್ದರು. ಕ್ರಮೇಣ ಕನ್ನಡದಲ್ಲೂ ಆಸಕ್ತಿ ಮೂಡಿತು. ಸಂಗೀತದಂತೆಯೇ ರಾಜಮ್ಮನವರಿಗೆ ಸಾಹಿತ್ಯದಲ್ಲೂ ಚಿಕ್ಕಂದಿನಿಂದಲೇ ಪರಿಶ್ರಮವಿತ್ತು. ರವೀಂದ್ರನಾಥ ಠಾಕೂರರ  `ಧೃಢಪ್ರತಿಜ್ಞೆ’ ಎನ್ನುವ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ.ತಪಸ್ವಿನಿ, ಮಹಾಸತಿ ವಾತ್ಸಲ್ಯ ತರಂಗ ಲೀಲಾ ಅವರ ಕಾವ್ಯ ನಾಟಕಗಳು. ಸ್ವರ್ಗ, ನಿರಸನ, ಉನ್ಮತ್ತ ಭಾಮಿನಿ, ದುಂದುಭಿ ಎಂಬ ಕಿರು ನಾಟಕಗಳನ್ನು ರಚಿಸಿದ್ಧಾರೆ.

ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಶ್ರೇಷ್ಠ ಸಾಹಿತಿ ಎಂಬ ಗೌರವ, ಬೆಂಗಳೂರು ಅಮೆಚೂರ್ ನಾಟಕ ಸಂಘದ ಸ್ಪರ್ಧೆಯಲ್ಲಿ “ಸುಖಮಾರ್ಗ' ನಾಟಕಕ್ಕೆ ಬಹುಮಾನ ಪಡೆದಿದ್ಧಾರೆ.

ತಿರುಮಲೆ ರಾಜಮ್ಮ

(20 Nov 1900-11 Oct 1984)