About the Author

ಲೇಖಕ ತುರುವನೂರು ಮಂಜುನಾಥ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ತುರುವನೂರಿನವರು. ತಂದೆ ತಿಪ್ಪೇಸ್ವಾಮಿ ತಾಯಿ ಜಯಮ್ಮ ರೈತ ಕುಟುಂಬದಿಂದ ಬಂದವರು. ಹುಟ್ಟೂರಿನಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಪಡೆದರು. ಸ್ನಾತಕೋತ್ತರ ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಿಂದ ಪ್ರಕಟವಾಗುತ್ತಿದ್ದ ‘ಜನವಾಹಿನಿ’ (!992) ವರದಿಗಾರನಾಗಿ ವೃತ್ತಿ ಆರಂಭಿಸಿದರು. (1994ರಲ್ಲಿ) ಚಿತ್ರದುರ್ಗದ ‘ಸುದ್ದಿಗಿಡುಗ’ ಪತ್ರಿಕೆ,  1996ರಿಂದ 2007ರವರೆಗೆ  ಸಂಯುಕ್ತ ಕರ್ನಾಟ ಪತ್ರಿಕೆ ಬೆಂಗಳೂರಿನಲ್ಲಿ ವರದಿಗಾರರಾಗಿ, ನಂತರ ಸುವರ್ಣ ಟಿವಿಗೆ ಸೇರ್ಪಡೆ ಎಫ್ ಐಆರ್ ಕ್ರೈಮ್ ನ್ಯೂಸ್ ಪ್ರೋಗ್ರಾಂ ಮುಖ್ಯ ವರದಿಗಾರಿಕೆ, ಕೋರ್ಟ್ ವರದಿ ಸ್ಪೆಷಲ್ ರಿಪೋರ್ಟ್ ಕಾರ್ಯಕ್ರಮ ನಿರೂಪಣೆ 2010 ಫೆಬ್ರವರಿಯಿಂದ ಹಿರಿಯ ವರದಿಗಾರನಾಗಿ  ಉದಯ ಟಿ ವಿ ಸೇರ್ಪಡೆ,  2013 ರಿಂದ ನ್ಯೂಸ್ ಏಜೆನ್ಸಿ ಆರಂಭಿಸಿ, 2014 ರಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಜನಶ್ರೀ ಟಿವಿ ಸೇರ್ಪಡೆ,  ಜೊತೆಗೆ, ‘ಸುದ್ದಿ ಸಮಾಚಾರ’ ದಿನಪತ್ರಿಕೆಗಳ ಸುದ್ದಿವಿಶ್ಲೇಷಣೆಯ ನಿರೂಪಣೆ,  2017 ರಲ್ಲಿ ‘ಕೆಂಧೂಳಿ’ ಸಂಜೆ ಪತ್ರಿಕೆ ಆರಂಭ, 2019 ನವೆಂಬರ್ ನಲ್ಲಿ ಮತ್ತೆ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಸೇರ್ಪಡೆ, 2019 ನವೆಂಬರ ನಿಂದ ‘ಕೆಂಧೂಳಿ’ ವಾರ ಪತ್ರಿಕೆ ನಡೆಸುತ್ತಿದ್ದಾರೆ.

ಕೃತಿಗಳು: ಜಾನಪದ ಕ್ರೀಡೆಗಳು (ಹಳ್ಳಿಆಟಗಳ ಪರಿಚಯ), ಸುಕ್ಕು ಮನಸುಗಳು (ಕವನ ಸಂಕಲನ), ಮನಮಿಡಿತ ( ಅಂಕಣ ಬರಹ)

ಪ್ರಶಸ್ತಿ-ಪುರಸ್ಕಾರಗಳು: ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ  (2014), ಕರ್ನಾಟk ಕಾರ್ಯನಿರತ ಪತ್ರಕರ್ತರ ಸಂಘದಿಂದ (2019) ಕೆಂಪೇಗೌಡ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ (ಪರ್ಯಾಯ) ಸಂಘ ದಿಂದ ಮಾಧ್ಯಮ ಸೇವಾ ಪ್ರಶಸ್ತಿ ಲಭಿಸಿವೆ.

ತುರುವನೂರು ಮಂಜುನಾಥ

(07 Sep 1967)