About the Author

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳರು (ಜನನ 1946) ಉಡುಪಿಯಲ್ಲಿ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ಸಂಘಟಿಸಿದ್ದರು. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಉಪ್ಪುಂದ ಚಂದ್ರಶೇಖರ ಹೊಳ್ಳರು ನಂತರ ಅದನ್ನು ಬಿಟ್ಟು ಉದ್ಯಮಿಯಾಗಿ ದಾವಣಗೆರೆಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸಿದ್ದರು. ಹೊಳ್ಳರು ಕಾವ್ಯ, ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಡಿದ್ದರು. ಅವರ ಮಡದಿ ವರಮಹಾಲಕ್ಷ್ಮಿ ಹೊಳ್ಳ ಅವರು ಅಂಕಣಕಾರ್ತಿ, ಕತೆಗಾರ್ತಿ.

ಗ್ರಾಮೀಣಾಭಿವೃದ್ಧಿಯ ಕನಸಿನೊಂದಿಗೆ ಹುಟ್ಟೂರಿಗೆ ಬಂದ ಅವರುಮರಳಿದರು ಶಂಕರ ಕಲಾಮಂದಿರ, ಸೂರ್ಯನಾರಾಯಣ ಗ್ರಂಥ ಭಂಡಾರ, ಮತ್ತು ಕುಂದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಸಂಸ್ಕೃತಿ ಆಧಾರಿತ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಕವಿ, ಸಾಹಿತಿಯಾಗಿರುವ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು 27 ಕೃತಿಗಳನ್ನು (4 ಕವನ ಸಂಕಲನಗಳು, 3 ಯಾತ್ರಾನುಭವ ಕಥನಗಳು, 3 ಅಧ್ಯಯನ ಗ್ರಂಥ, 5 ವ್ಯಕ್ತಿಚಿತ್ರ ಪ್ರಕಟಿಸಿದ್ದಾರೆ. 'ಕುಂದನಾಡು ದೇವಾಲಯ ಸಂಸ್ಕೃತಿ' ಎನ್ನುವ ಮಹಾಗ್ರಂಥ ಇತ್ಯಾದಿ) ಪ್ರಕಟಿಸಿದ್ದಾರೆ.

ಉಪ್ಪುಂದ ಚಂದ್ರಶೇಖರ ಹೊಳ್ಳ