ಎನ್‌.ಪಿ. ಭಟ್ಟ

Author : ಉಪ್ಪುಂದ ಚಂದ್ರಶೇಖರ ಹೊಳ್ಳ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 191 ಪುಸ್ತಕ 'ಎಲ್ಲೆಲ್ಲು ಕನ್ನಡದ ಕಂಪು ಹರಡಿದ ಎನ್‌.ಪಿ. ಭಟ್ಟ’. ಎನ್‌.ಪಿ. ಭಟ್ಟ ಎಂದು ಚಿರಪರಿಚಿತರಾಗಿದ್ದ ನಾರಾಯಣ ಪರಮೇಶ್ವರ ಭಟ್ಟ ಅವರು ಅಖಿಲ ಭಾರತ ಮಟ್ಟದ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1958ರಲ್ಲಿ ಮದ್ರಾಸಿನಲ್ಲಿ ಆದಾಯಕರ ತೆರಿಗೆ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದರು.1962ರಲ್ಲಿ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂ.ಎ. ಪರೀಕ್ಷೆ ಬರೆಯಲು ಹಣವಿಲ್ಲದ್ದರಿಂದ ಸಾಲ ಮಾಡಿ-ಉದ್ಯೋಗಕ್ಕೆ ರಜೆ ಹಾಕಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸೂರತ್‌, ಇಂದೋರ್‌ ಮತ್ತು ದೆಹಲಿಯಲ್ಲಿ ಕಾರ್ಯ ನಿರ್ವಹಸಿದ್ದರು. ವಿ.ಕೃ. ಗೋಕಾಕ್‌ ಅವರ ಪುತ್ರಿ ಯಶೋಧಾ ಅವರನ್ನು ಮದುವೆಯಾಗಿದ್ದ ಎನ್‌.ಪಿ. ಭಟ್ಟ ಅವರು ಸಣ್ಣಕತೆಗಳನ್ನು ನಾರಂಗಿ ಭಟ್ಟ, ರಂಜನ ಭಟ್ಟ ಹೆಸರಿನಲ್ಲಿ ಪ್ರಕಟಿಸಿದ್ದರು. ದಕ್ಷಿಣ ಧ್ರುವ ನಕ್ಕಾಗ (1955) ಕತಾ ಸಂಕಲನವು ಧಾರವಾಡದ ಪ್ರತಿಭಾ ಮುದ್ರಣಾಲಯದಿಂದ ಪ್ರಕಟವಾಗಿತ್ತು. ’ಅಲ್ಲಿ ಇಲ್ಲಿಯ ಕತೆಗಳು’ (1985) ಕತಾ ಸಂಕಲನವನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿತ್ತು. ಹೆಮ್ಮರಗಳು ತಲೆಯೆತ್ತಿವೆ (1984) ಕವನ ಸಂಕಲನವನ್ನು ಅನನ್ಯ ಪ್ರಕಾಶನ ಪ್ರಕಟಿಸಿದೆ. ಅವರ ಕುಬೇರ ರಾಜ್ಯ ಚಿತ್ರ-ವಿಚಿತ್ರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮನದಾಳದ ಮುತ್ತು ರತ್ನಗಳು, ನೆನಪಿನ ಉಯ್ಯಾಲೆ ಅವರ ಪ್ರಕಟಿತ ಕೃತಿಗಳು.

About the Author

ಉಪ್ಪುಂದ ಚಂದ್ರಶೇಖರ ಹೊಳ್ಳ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳರು (ಜನನ 1946) ಉಡುಪಿಯಲ್ಲಿ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ಸಂಘಟಿಸಿದ್ದರು. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಉಪ್ಪುಂದ ಚಂದ್ರಶೇಖರ ಹೊಳ್ಳರು ನಂತರ ಅದನ್ನು ಬಿಟ್ಟು ಉದ್ಯಮಿಯಾಗಿ ದಾವಣಗೆರೆಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸಿದ್ದರು. ಹೊಳ್ಳರು ಕಾವ್ಯ, ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಡಿದ್ದರು. ಅವರ ಮಡದಿ ವರಮಹಾಲಕ್ಷ್ಮಿ ಹೊಳ್ಳ ಅವರು ಅಂಕಣಕಾರ್ತಿ, ಕತೆಗಾರ್ತಿ. ಗ್ರಾಮೀಣಾಭಿವೃದ್ಧಿಯ ಕನಸಿನೊಂದಿಗೆ ಹುಟ್ಟೂರಿಗೆ ಬಂದ ಅವರುಮರಳಿದರು ಶಂಕರ ಕಲಾಮಂದಿರ, ಸೂರ್ಯನಾರಾಯಣ ಗ್ರಂಥ ಭಂಡಾರ, ಮತ್ತು ...

READ MORE

Related Books