About the Author

ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ 1945 ಮೇ 23 ರಂದು ಜನಿಸಿದರು. ಎಂ.ಎ ಪದವೀಧರರಾದ ಉಷಾ ಪಿ. ರೈ ಅವರ ತಂದೆ ಸ್ವಾತಂತ್ಯ್ರ ಹೋರಾಟಗಾರ ಹಾಗೂ ನವಯುಗ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ದಿ.ಕೆ ಹೊನ್ನಯ್ಯಶೆಟ್ಟಿ ಮತ್ತು ತಾಯಿ ಕೆ ಪದ್ಮಾವತಿ ಶೆಟ್ಟಿ. ಉಷಾ ಪಿ ರೈ ಅವರ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಡಗೊಂಡಿದ್ದು ಕನ್ನಡದ ಹಿರಿಯ ಲೇಖಕಿ. ಉಷಾ ಅವರ ಮೊದಲ ಕಾದಂಬರಿ “ಅನುಭಂದ”, 1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥನಗಳು, ಪ್ರವಾಸ ಕಥನ, ಲೇಖನಗಳು, ಚಿಂತನಗಳು ಪ್ರಕಟಗೊಂಡಿವೆ. ಪರಿಭ್ರಮಣ, ಉತ್ತರಣ, ಸುಪ್ತಸ್ವರ, ನಿಶಾನೆ, ಜಾಗೃತಿ, ನಿಯತಿ ಇವರ ಕಾದಂಬರಿಗಳು. ಕನಸುಗಳು ನನಸುಗಳು, ಹಕ್ಕು ಮತ್ತು ಗಿಡುಗ, ಊರುಗೋಲು (ತುಳುವಿನಲ್ಲಿ) ಕವನ ಸಂಕಲನಗಳು. ಬದುಕೆಂಬ ಚದುರಂಗದಾಟದ ದಾಳಗಳು, ಒಂದೇ ದೋಣಿಯ ಪ್ರಯಾಣಿಕರು ಇವರ ಪ್ರಸಿದ್ಧ ಕಥೆಗಳು. ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ ಇವರ ಪ್ರವಾಸ ಕಥನ. ನವಯುಗದ ಪ್ರವರ್ತಕ ಕೆ ಹೊನ್ನಯ್ಯು, ಲೇಖಕಿ, ಲೇಖಲೋಕ-೨, ಲೇಖಲೋಖ-೪, ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸ್ಸು ಕೃತಿಗಳು ಇವರ ಸಂಪಾದನೆ. ಸಾಹಿತ್ಯವಲ್ಲದೆ ಉತ್ತಮ ಚಿತ್ರ ಕಲಾವಿದರು ಹೌದು. ಇವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ’ಪದ್ಮ ಭೂಷಣ ಬಿ. ಸರೋಜದೇವಿ, ಶ್ರೀ ಹರ್ಷ ಪ್ರಶಸ್ತಿ, ಕನ್ನಡಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿನಿಧಿ ಪ್ರಶಸ್ತ’ , ’ಹಕ್ಕಿ ಮತ್ತು ಗಿಡುಗ’ ಕೃತಿಗೆ ಅಮ್ಮ ಪ್ರತಿಷ್ಠನ ಗುಲ್ಬರ್ಗದ ’ಅಮ್ಮ ಪ್ರಶಸ್ತಿ’ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು. ಶಾಂತಿನಗರ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹೊಂದಿದ್ದರು. 

ಉಷಾ ಪಿ. ರೈ. ಕೆ

(23 May 1945)