About the Author

ಸುಪ್ರಸಿದ್ದ ಚಿತ್ರಕಲಾವಿದ, ಲೇಖಕ, ಕನ್ನಡ ಚಳವಳಿಗಾರ ವ್ಹಿ.ಸಿ. ಮಾಲಗತ್ತಿ ಅವರು 18-10-1922ರಂದು ವಿಜಾಪುರ ಜಿಲ್ಲೆಯ ಇಲಕಲ್ಲನಲ್ಲಿ ಜನಿಸಿದರು. ಬೆಳಗಾವಿ, ಮುಂಬಯಿಗಳಲ್ಲಿ ಶಿಕ್ಷಣ ಪಡೆದು ಕಲಾಶಿಕ್ಷಣದಲ್ಲಿ ಉಚ್ಛಪದವಿ ಪಡೆದರು. ಆನಂತರ ಕೆ.ಎಲ್.ಇ ಸೊಸೈಟಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಲಾವಿಭಾಗದ ಮುಖ್ಯಸ್ಥರಾಗಿದ್ದರು.  ಕಲೆಗೆ ತಮ್ಮ ಜೀವನವನ್ನು ಮುಡಿಪಿಟ್ಟ ಮಾಲಗತ್ತಿಯವರು ಬೆಳಗಾವಿಯ ಸಾಹಿತ್ಯ ಭವನ ವಿಶ್ವಸ್ತ ಮಂಡಲಿ'ಯ 'ಕಾರ್ಯದರ್ಶಿಯಾಗಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಲಾಪ್ರಪಂಚಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಲಲಿತ ಕಲಾ ಅಕಾಡಮಿ -1980 ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. 1985 ರ ಅಖಿಲ ಭಾರತ ಕಲೆ - ಕೈಗಾರಿಕಾ ಶಿಕ್ಷಣ ಮಂಡಳಿ ದಿಲ್ಲಿಗೆ ಕರೆಯಿಸಿಕೊಂಡು ಗೌರವ ಪ್ರಶಸ್ತಿ ನೀಡಿದೆ. ಇವರ ಪ್ರಯತ್ನದಿಂದಲೇ ಬೆಳಗಾವಿ ಮಹಾನಗರಕ್ಕೆ ವಿಶ್ವಸ್ತ ಮಂಡಳಿ ಸುಂದರ ಮತ್ತು ಭವ್ಯವಾದ ಭವನ ದೊರಕಿದೆ. ಕಲಾಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.

ವಿ.ಸಿ. ಮಾಲಗತ್ತಿ

(18 Oct 1922)