ಕುಮಾರ ಗಂಧರ್ವ

Author : ವಿ.ಸಿ. ಮಾಲಗತ್ತಿ

Pages 88

₹ 25.00




Year of Publication: 1994
Published by: ಮಾಲಗತ್ತಿ ಆಫ್ ಸೆಟ್ ಪ್ರಿಂಟರ್ಸ್ ಮತ್ತು ಪ್ರಕಾಶಕರು
Address: 1ನೇ ಮುಖ್ಯರಸ್ತೆ, 2ನೇ ತಿರುವು, ಸದಾಶಿವನಗರ, ಬೆಳಗಾವಿ- 590001

Synopsys

‘ಕುಮಾರ ಗಂಧರ್ವ’ ಖ್ಯಾತ ಹಿಂದುಸ್ತಾನಿ ಗಾಯಕ ಕುಮಾರ ಗಂಧರ್ವ ಅವರ ಬದುಕಿನ ಚಿತ್ರಣ. ಈ ಕೃತಿಯನ್ನು ಕಲಾವಿದ, ಲೇಖಕ ವಿ.ಸಿ. ಮಾಲಗತ್ತಿ ಅವರು ರಚಿಸಿದ್ದಾರೆ. ಇಲ್ಲಿ ಕುಮಾರರ ಬಾಲ್ಯ, ಕುಮಾರ ಗಂಧರ್ವ ಹೆಸರು ಬಂದದ್ದು, ಸಂಗೀತ ಸರದಾರ, ಬಾಲ್ಯದ ಕಚೇರಿಗಳು, ಯೋಗಿಯ ರಂಗಮಂಚ ಪ್ರವೇಶ, ಪ್ರೊ. ದೇವಧರ ಸಾನ್ನಿಧ್ಯ, ಜಾನಪದ ಶೈಲಿ: ಸಂತ ಮಹಂತರ ಕಾವ್ಯದ ಅಭ್ಯಾಸ ಮತ್ತು ಸ್ವರ ರಚನೆ, ಬಹುಭಾಷಾ ಸಂಗೀತಜ್ಞ, ಸಂಗೀತ ಸಂಶೋಧಕ, ಹೊಸ ಬಂದೀಶಗಳು, ನವ ನಿರ್ಮಾಣ, ಕಾಲಿದಾಸ ಸಮ್ಮಾನ, ಚಿಂತಕ, ಪರೀಕ್ಷಾಕಾಲ, ಲೋಕ ಸಂಗೀತ, ಶಬ್ದಗಳ ಮಹತ್ವ, ನಿಸರ್ಗ ಪ್ರೇಮಿ, ಪದ್ಮ ವಿಭೂಷಣ, ಕುಮಾರರ ಸಾದಾ ಜೀವನ ಸೇರಿದಂತೆ ಕುಮಾರ ಗಂಧರ್ವರ ಬದುಕಿನ ಮುಖ್ಯ ಘಟ್ಟಗಳು ಮತ್ತು ಘಟನೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ವಿ.ಸಿ. ಮಾಲಗತ್ತಿ
(18 October 1922)

ಸುಪ್ರಸಿದ್ದ ಚಿತ್ರಕಲಾವಿದ, ಲೇಖಕ, ಕನ್ನಡ ಚಳವಳಿಗಾರ ವ್ಹಿ.ಸಿ. ಮಾಲಗತ್ತಿ ಅವರು 18-10-1922ರಂದು ವಿಜಾಪುರ ಜಿಲ್ಲೆಯ ಇಲಕಲ್ಲನಲ್ಲಿ ಜನಿಸಿದರು. ಬೆಳಗಾವಿ, ಮುಂಬಯಿಗಳಲ್ಲಿ ಶಿಕ್ಷಣ ಪಡೆದು ಕಲಾಶಿಕ್ಷಣದಲ್ಲಿ ಉಚ್ಛಪದವಿ ಪಡೆದರು. ಆನಂತರ ಕೆ.ಎಲ್.ಇ ಸೊಸೈಟಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಲಾವಿಭಾಗದ ಮುಖ್ಯಸ್ಥರಾಗಿದ್ದರು.  ಕಲೆಗೆ ತಮ್ಮ ಜೀವನವನ್ನು ಮುಡಿಪಿಟ್ಟ ಮಾಲಗತ್ತಿಯವರು ಬೆಳಗಾವಿಯ ಸಾಹಿತ್ಯ ಭವನ ವಿಶ್ವಸ್ತ ಮಂಡಲಿ'ಯ 'ಕಾರ್ಯದರ್ಶಿಯಾಗಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಲಾಪ್ರಪಂಚಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಲಲಿತ ...

READ MORE

Related Books