About the Author

ವ್ಹಿ.ಜಿ. ಪೂಜಾರ ಅವರು ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವರು. ರಾಮದುರ್ಗ ತಾಲ್ಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು; ವೀರಶೈವ ಸಾಹಿತ್ಯದಲ್ಲಿ ಪವಾಡ ಕಥೆಗಳು ಎಂಬುದು ಇವರ ಸಂಶೋಧನಾ ಮಹಾಪ್ರಬಂಧ, ಕವಿವಾಣಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳು, ನಿಷ್ಠೆಯ ಕಡಲಪ್ಪ- ವೀರಪ್ಪನವರು, ಸ್ವರವಚನಗಳಲ್ಲಿ ವಿಡಂಬನೆ, ಸಾಹಿತ್ಯ ಸಮಾವೇಶ, ಸಾಹಿತ್ಯ ಮಾರ್ಗ, ಶರಣರ ಎರಡು ನಾಟಕಗಳು, ಕನ್ನಡ ಸಾಹಿತ್ಯ, ಸಾಹಿತ್ಯ ಸಂಬಂಧ, ಶೋಧ, ಸಮೀಕ್ಷೆ, ರಾಮಪುರ ಚಿಕ್ಕಪ್ಪಯ್ಯನ ಸ್ವರ ವಚನ, ತ್ರಿವಿಧಿ, ಸಂಗವಿಭು ಮುಂತಾಗಿ ಅರವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಸಂಪಾದನೆ, ಸಂಶೋಧನೆ, ನಡುಗನ್ನಡ ಸಾಹಿತ್ಯದ ವಿಮರ್ಶೆ-ಹೀಗೆ ಹಲವು ವಿಧದಲ್ಲಿ ತಮ್ಮ ಸಾಹಿತ್ಯದ ವಿಮರ್ಶೆ ಮಾಡಿ ಸಾಹಿತ್ಯದ ಸೊಬಗನ್ನು ಈ ನಾಡು-ನುಡಿಗೆ ಅರ್ಪಿಸಿದ್ದಾರೆ.

ವ್ಹಿ.ಜಿ.ಪೂಜಾರ